ಹೊಟ್ಟೆ ಯಲ್ಲಿ ಉರಿ…..

ಸಾಮಾನ್ಯವಾಗಿ ನಾವು ಹೊಟ್ಟೆಯಲ್ಲಿ ಒಂದು ತರಹದ ಉರಿಯನ್ನು ಕೆಲವು ಸಲ ಅನುಭವಿಸುತ್ತೇವೆ ಆದರೆ ನಾವು ಅದನ್ನು ಸಣ್ಣ ಅಸ್ವಸ್ಥತೆ ಎಂದು ನಿರ್ಲಕ್ಷಿಸುತ್ತೇವೆ. ದೊಡ್ಡಕರುಳು ಹಾಗೂ ಗುದನಾಳದ ಒಳಭಾಗದಲ್ಲಿ ಉಂಟಾಗುವ ಸಮಸ್ಯೆಯೇ ಇದಕ್ಕೆ ಕಾರಣವಾಗಿರುತ್ತದೆ

ಕರುಳಿನ ಉರಿಯನ್ನು ನಿವಾರಿಸಲು ಮೊಸರು ನಿಸರ್ಗ ನೀಡಿದ ಅತ್ಯುತ್ತಮ ಪರಿಹಾರಗಳಲ್ಲೊಂದಾಗಿದೆ. ಮೊಸರಿನಲ್ಲಿರುವ ಜೀರ್ಣಕ್ರಿಯೆಗೆ ಸಹಕರಿಸುವ ಸ್ನೇಹಿ ಬ್ಯಾಕ್ಟೀರಿಯಾಗಳು ಕರುಳಿನ ಒಳಗೆ ಪಿಎಚ್ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣಾಂಗಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡಿ ಜಠರ ಮತ್ತು ಕರುಳುಗಳಿಂದ ವಿಷಕಾರಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ.

ಪ್ರತಿದಿನವೂ ಒಂದು ಕಪ್ ಮೊಸರನ್ನು ತಪ್ಪದೇ ಸೇವಿಸಿ. ನಿಮ್ಮ ನಿತ್ಯದ ಆಹಾರಗಳಲ್ಲಿ ಹಣ್ಣುಗಳು, ಹಸಿ ತರಕಾರಿಗಳು ಹಾಗೂ ಇವುಗಳಿಂದ ತಯರಿಸಿದ ಸಾಲಾಡ್ ಹಾಗೂ ಸ್ಮೂಥಿಗಳಲ್ಲಿ ಮೊಸರನ್ನು ಬೆರೆಸಿ ಸೇವಿಸಿ.

ಆಲೂಗಡ್ಡೆ ಕ್ಷಾರೀಯವಾಗಿದ್ದು ಕರುಳಿನ ಉರಿಗೆ ಕಾರಣವಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಅತಿಸಾರ ಹಾಗೂ ಕರುಳಿನ ಹುಣ್ಣು ಆಗಿದ್ದಾಗ ಈ ರಸ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ಒಂದು ಹಸಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಹಿಂಡಿ ರಸ ತೆಗೆದು ಸಂಗ್ರಹಿಸಿಡಿ. ಈ ರಸವನ್ನು ನೇರವಾಗಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ.

ಎರಡು ದೊಡ್ಡ ಚಮಚ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಬೇಯಿಸಿ. ಅಕ್ಕಿ ಪೂರ್ಣವಾಗಿ ಬೆಂದ ಬಳಿಕ ಉರಿಯನ್ನು ಆರಿಸಿ ನೀರು ಹಾಗೇ ತಣಿಯಲು ಬಿಡಿ. ಈ ನೀರು ನೀವು ಕುಡಿಯಲು ಸಾಧ್ಯವಾಗುವಷ್ಟು ತಣಿದ ಬಳಿಕ ಇದನ್ನು ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ದಿನಕ್ಕೆ ಒಂದರಿಂದ ಎರಡು ಲೋಟದಷ್ಟು ಕುಡಿಯಿರಿ.

ನಿಮ್ಮ ಮನೆಯಲ್ಲಿ ಜ್ಯೂಸರ್ ಲಇದ್ದರೆ ಒಂದೆರಡು ಕ್ಯಾರೆಟ್ ಗಳನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಇಲ್ಲವಾದರೆ, ಎರಡು ಕ್ಯಾರೆಟ್ಟುಗಳನ್ನು ನೀರಿನಲ್ಲಿ ಉಪ್ಪಿಲ್ಲದೇ ಕುದಿಸಿ ಮೃದುವಾದ ಬಳಿಕ ಇದನ್ನು ಜಜ್ಜಿ ಪ್ಯೂರಿ ತಯಾರಿಸಿ. ಈ ರಸವನ್ನು ಅಥವಾ ಪ್ಯೂರಿಯನ್ನು ದಿನಕ್ಕೊಂದು ಬಾರಿ ಸೇವಿಸಿ. ಉರಿಯೂತ ಪೂರ್ಣವಾಗಿ ಗುಣವಾಗುವವರೆಗೆ ಇದರ ಸೇವನೆಯನ್ನು ಮುಂದುವರೆಸಿ.

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣು ಹಾಗೂ ಒಂದು ದೊಡ್ಡಚಮಚ ಜೇನು ಬೆರೆಸಿ ದಿನಕ್ಕೊಂದು ಬಾರಿ ಸೇವಿಸಿ. ಅಥವಾ ಬಾಳೆಹಣ್ಣನ್ನು ಕೊಂಚಕೊಂಚವಾಗಿ ಇಡೀ ದಿನ ತಿನ್ನುತ್ತಿರಿ ಹಾಗೂ ಬಾಳೆಹಣ್ಣು ಸೇರಿಸಿ ತಯಾರಿಸಿದ ಸ್ಮೂಥಿಗಳನ್ನು ಕುಡಿಯಿರಿ