ಹೊಟ್ಟೆ ಪಾಡಿಗಾಗಿ ಹೊರರಾಜ್ಯಗಳಿಂದ ಬಂದ ಮಕ್ಕಳ ಶೈಕ್ಷಣಿಕ ಬಗ್ಗೆ ವಿಚಾರಣೆ

ಚಿಂಚೋಳಿ:ಡಿ.31: ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆಯ ನಿಂಬೊಟಿ ಗ್ರಾಮದ ಸುಮಾರು 16 ಕುಟುಂಬಗಳು ಕಬ್ಬಿನ ಗದ್ದೆಯಲ್ಲಿ ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೋಪಡಿ ಹಾಕಿಕೊಂಡು ಬೀಡು ಬಿಟ್ಟಿದ್ದ ಸ್ಥಳಗಳಿಗೆ ಹೋಗಿ ಹಾಗೂ ಪಕ್ಕದ ತೆಲಂಗಾಣ ರಾಜ್ಯದಿಂದ ಪ್ಲಾಸ್ಟಿಕ್ ಕೊಡಗಳು ಮಾರಾಟ ಮಾಡುತ್ತ 7-8, ವರ್ಷಗಳಿಂದ ಚಿಂಚೋಳಿ ಚಂದಾಪೂರ ಪಟ್ಟಣದಲ್ಲಿ ಬಟ್ಟೆಯಿಂದ ಹಾಕಿಕೊಂಡ ಗುಡಿಸಲುಗಳಲ್ಲಿ ವಾಸ ಮಾಡುವಲ್ಲಿಗೆ ಹೋಗಿ ಅವರ ಮಾಹಿತಿ ಪಡೆದ ಸಿ.ಡಿ.ಪಿ.ಓ ಗುರುಪ್ರಸಾದರವರು ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಅವರ ಮನ ಪರಿವರ್ತನೆ ಮಾಡಿದರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೆಣ್ಣು ಮಕ್ಕಳಿಗೆ ಕಿಶೋರಿಯರಿಗೆ ಬಾಣಂತಿಯರಿಗೆ ಗರ್ಬಿಣಿಯರಿಗೆ ಸುಕನ್ಯಾ ಸಮೃದ್ಧಿ ಮಾತ್ರ ವಂದನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸದರಿ ಬಗ್ಗೆ ಕ್ರಮ ವಹಿಸಿದರು ಮತ್ತು ಐದು ಕುಟುಂಬಗಳಿಗೆ ಸಿಡಿಪಿಓ ಮತ್ತು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ತಿಂಗಳಿಗಾಗುವಷ್ಠು ಆಹಾರ ಪದಾರ್ಥಗಳನ್ನು ಖರಿದೀಸಿ ಚಿಂಚೋಳಿ ತಾಲೂಕ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿರವರ ಮುಖಾಂತರ ವಲಸೆ ಬಂದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಗಳು ವಿತರಿಸಿ ಮತ್ತು ಅವರಿಗೆ ಇರುವ ಸಮಸ್ಯಗಳಾದ ಆಧಾರ್ ಕಾರ್ಡ್ ರೇಷನ್ ಕಾರ್ಡ್ ವಾಸಿಸುವ ಮನೆಯ ಬಗ್ಗೆ ಮಾರುತಿ ಗಂಜಗಿರಿ ರವರು ತಹಸಿಲ್ದಾರವರ ಗಮನಕ್ಕೆ ತಂದಾಗ ಅವರು ಶಿಘ್ರವಾಗಿ ಆಧಾರ ಕಾರ್ಡ್ ಚುನಾವಣೆ ಗುರುತಿನ ಚೀಟಿ ನೀಡುವುದಾಗಿ ಹೇಳಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ತಾವುಗಳು ಕಾರ್ಯಪ್ರವೃತ್ತರಾಗಬೇಕು ಶಿಕ್ಷಣದಿಂದ ಮಾತ್ರ ನಮ್ಮೆಲ್ಲಾ ಸಮಸ್ಯಗಳಿಗೆ ಮುಕ್ತಿ ಸಿಗುತ್ತದೆ ಎಂದು ಪ್ರೇರೆಪಿಸಿದರು ಈ ಸಂದರ್ಭದಲ್ಲಿ ರವಿಗೌಡ ಶಿರಸ್ತೇದಾರ್ ಹಿರಿಯ ಮೇಲ್ವಿಚಾರಕಿ ಸರೋಜಾಬಾಯಿ ಉದಯಕುಮಾರ್ ಶಾಮರಡ್ಡಿ ಸುಲೇಪೇಟ ಹರ್ಷವರ್ಧನ ಸಂಪತ್ ರಾಠೋಡ ಅಂಕಿತಾ ಮುಂತಾದವರು ಉಪಸ್ಥಿತರಿದ್ದರು