ಹೊಟ್ಟೆ ನೋವಿಗೆ ಮನೆ ಮದ್ದು

ಹೊಟ್ಟೆ ನೋವು ಎನ್ನುವುದು ಎಲ್ಲಾ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆಲ್ಲಾ ಮುಖ್ಯ ಕಾರಣ, ಯಾವುದೋ ಅಗ್ಗದ ಅಥವಾ ಹಾಳಾದ, ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ, ಅಜೀರ್ಣ ಸಮಸ್ಯೆ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಹೀಗೆ ಮುಂತಾದ ಹಲವಾರು ಸಮಸ್ಯೆಗಳಿರಬಹುದು. ಋತುಚಕ್ರದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ವಿಪರೀತವಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಹೊಟ್ಟೆನೋವು ಕಡಿಮೆ ಮಾಡಲು ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊಂದು ಮನೆ ಮದ್ದುಗಳು
ಹಸಿ ಶುಂಠಿಯ ಸಿಪ್ಪೆ ತೆಗೆದು ಬಳಿಕ ಅದನ್ನು ಒಂದು ಲೋಟ ನೀರಿಗೆ ಹಾಕಿ ಹತ್ತು ನಿಮಿಷ ಕುದಿಸಿರಿ. ಬಳಿಕ ಆ ನೀರನ್ನು ಸೋಸಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಕುಡಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.
ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸಿದರೆ, ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಎರಡು ದಿನಕ್ಕೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುವುದರಿಂದ, ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು.
ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ಹೊಟ್ಟೆ ನೋವಿನಿಂದ ತಕ್ಷಣ ಪರಿಹಾರ ಕಂಡು ಕೊಳ್ಳಬಹುದು.
ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ನಿಂಬೆ ಹಣ್ಣನ ರಸ ಹಾಕಿ ಕುಡಿದರೆ ತಕ್ಷಣ ಹೊಟ್ಟೆ ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಸೇಬು, ಕ್ಯಾರೆಟ್, ಬೀಟ್ ರೂಟ್ ಜ್ಯೂಸ್ ಹಾಗೂ ನಾರು ಪದಾರ್ಥವಿರುವ ಆಹಾರವನ್ನು ಸೇವಿಸಿದರೆ ಹೊಟ್ಟೆ ನೋವು ಮಾಯವಾಗುತ್ತವೆ.
ಪ್ರತ ದಿನ ಹೊಟ್ಟೆನೋವಿನಿಂದ ಬಳಲುತ್ತಿರುವವರು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ನಂತರ ವಾಕಿಂಗ್ ಗೆ ಹೋಗುವುದರಿಂದ ದೇಹದಲ್ಲಿ ಜೀರ್ಣ ಕ್ರಿಯೆ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆನೋವು ದಿನಕಳೆದಂತೆ ಶಮನಗೊಳ್ಳುತ್ತದೆ.
ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಬಿಸಿ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ಯಾಕೆಂದರೆ ಇದು ಆರೋಗ್ಯ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಒಂದು ಲೋಟ ನೀರಿಗೆ ಆರು ದೊಡ್ಡ ಪುದೀನಾ ಎಲೆಗಳನ್ನು ಹಾಕಿ ಜ್ಯೂಸರ್‌ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ ಕುಡಿದರೆ ಹೊಟ್ಟೆನೋವು ಕಡಿಮೆಯಾಗುತ್ತಾದೆ.
ತುಂಬಾ ಹೊಟ್ಟೆ ನೋವು ಇದ್ದರೆ ಎಳನೀರಿಗೆ ಗ್ಲೂಕೋಸ್ ಹಾಕಿ, ಮಿಕ್ಸ್ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಜೊತೆಗೆ ಸುಸ್ತು ಕಡಿಮೆಯಾಗುತ್ತದೆ.