ಹೊಟ್ಟೆ ಉಬ್ಬರವೇ..

ಕೆಲವೊಮ್ಮೆ ಹೊಟ್ಟೆ ಉಬ್ಬರಿಸುವಾಗ ನೋವು ಕೂಡ ಆರಂಭವಾಗುತ್ತದೆ. ಈ ನೋವು ತುಂಬಾ ಕಿರಿಕಿಯನ್ನುಂಟು ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರದೊಂದಿಗೆ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಂಡಾಶಯದ ಕ್ಯಾನ್ಸರ್ ಇರುವ ಸಾಧ್ಯತೆಯೂ ಇದೆ. ಹೊಟ್ಟೆ ಉಬ್ಬರದ ನೋವನ್ನು ತಡೆಯಲು ಔಷಧಿ ಮತ್ತು ಮುನ್ನೆಚ್ಚರಿಕೆ ಕ್ರಮಗಳಿವೆ. ನೀವು ಹೊಟ್ಟೆ ಉಬ್ಬರದ ನೋವಿನಿಂದ ಬಳಲುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

ಹೊಟ್ಟೆಯೊಳಗಿನ ಕೆಲಸಕಾರ್ಯಗಳು ಸರಿಯಾದ ರೀತಿಯಲ್ಲಿ ಆಗದೇ ಇದ್ದಾಗ ಹೊಟ್ಟೆ ಉಬ್ಬರದ ನೋವು ಕಾಣಿಸಿಕೊಳ್ಳುತ್ತದೆ. ಅನಿಯಮಿತ ಮಲ, ಮಲಬದ್ಧತೆ ಮತ್ತು ಗ್ಯಾಸ್ ನಿಂದಾಗಿ ನೋವು ಬರಬಹುದು. ಹೊಟ್ಟೆ ಉಬ್ಬರಿಸಿದೆ ಎಂಬ ಭಾವನೆಯಾದಾಗ ಸಾಕಷ್ಟು ನೀರು ಕುಡಿಯಿರಿ. ಇದು ನೋವು ಕಡಿಮೆ ಮಾಡಿ ಮಲಬದ್ಧತೆ ನಿವಾರಿಸುತ್ತದೆ.

ಹೊಟ್ಟೆ ಉಬ್ಬರಿಸಿ ನಿಮಗೆ ಭಾರವಾದ ಭಾವನೆಯಾಗುತ್ತಿದ್ದರೆ ಆಗ ಮನೆಯಿಂದ ಹೊರಗೆ ಹೋಗಿ ಸ್ವಲ್ಪ ನಡೆದಾಡಿ. ದೈಹಿಕ ಚಟುವಟಿಕೆಯಿಂದ ಹೊಟ್ಟೆಯಲ್ಲಿ ತುಂಬಿರುವ ಗ್ಯಾಸ್ ಹೊರಹೋಗುತ್ತದೆ. ಇದು ಹೊಟ್ಟೆ ಉಬ್ಬರ ನಿವಾರಿಸಲು ನೈಸರ್ಗಿಕ ವಿಧಾನ ಮತ್ತು ನೋವನ್ನು ಉಪಶಮನ ಮಾಡುತ್ತದೆ. ನಿಧಾನವಾಗಿ ನಡೆದರೆ ಯಾವುದೇ ಪ್ರಯೋಜನವಾಗಲ್ಲ. ಮುಂದೆ ಉಬ್ಬರದ ನೋವು ಬರದಂತೆ ಮಾಡಲು ಪ್ರತೀ ಸಲ ಊಟ ಮಾಡಿದ ಬಳಿಕ ನಡೆದಾಡಿ.

ಸೋಡಾ ಅಥವಾ ರಾಸಾಯನಿಕವಾಗಿ ಕಾರ್ಬೊನ್ ಡೈಯಾಕ್ಸೈಡ್ ಎಂದು ಕರೆಯಲ್ಪಡುವ ಪಾನೀಯ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಉಪಯುಕ್ತ. ಹೊಟ್ಟೆ ಭಾರವಾಗಿದೆ ಎಂದನಿಸಿದಾಗ ಸೋಡಾ ಕುಡಿಯಿರಿ. ಹೊಟ್ಟೆಯಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಗ್ಯಾಸ್ ನ್ನು ಹೊರಹೋಗುವಂತೆ ಮಾಡುತ್ತದೆ. ಇದರಿಂದ ಹೊಟ್ಟೆ ಹಿಂದಿನಂತಾಗಿ ನೋವು ಶಮನವಾಗುತ್ತದೆ.

ಪುದೀನಾ ತಿನ್ನುವುದರಿಂದ ಉಬ್ಬರ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ನೋವು ನಿವಾರಣೆಯಾಗುತ್ತದೆ. ಹೊಟ್ಟೆ ಉಬ್ಬರಕ್ಕೆ ಕಾರಣವೇನೆಂದು ತಿಳಿದು ಚಿಕಿತ್ಸೆ ಮಾಡಿದರೆ ನೋವು ತನ್ನಷ್ಟಕ್ಕೆ ಮಾಯವಾಗುತ್ತದೆ.

ಪುದೀನಾವನ್ನು ಚಹಾ ಅಥವಾ ಇತರ ಪಾನೀಯ ಮೂಲಕ ಸೇವಿಸಬಹುದು. ಸೋಡಾದೊಂದಿಗೆ ಪುದೀನಾ ಹಾಕಿ ಕುಡಿದರೆ ಅದು ಒಳ್ಳೆಯ ಮದ್ದು. ಹೊಟ್ಟೆ ಉಬ್ಬರದ ನೋವಿನಿಂದ ಪರಿಹಾರ ನೀಡುವ ಇತರ ವಸ್ತುಗಳೆಂದರೆ ಶುಂಠಿ, ಬ್ಲ್ಯಾಕ್ ಸಾಲ್ಟ್, ನಿಂಬೆ ಜ್ಯೂಸ್ ಇತ್ಯಾದಿ. ಇದರಲ್ಲಿ ಯಾವುದೇ ಆಹಾರ ಸೇವಿಸಿ ಹೊಟ್ಟೆ ಉಬ್ಬರದ ನೋವು ನಿವಾರಿಸಬಹುದು ಮತ್ತು ಹೊಟ್ಟೆಯನ್ನು ಮೊದಲಿನಂತೆ ಮಾಡಬಹುದು.

ನೈಸರ್ಗಿಕ ಮದ್ದುಗಳನ್ನು ಉಪಯೋಗಿಸಿದ ಬಳಿಕವೂ ನೋವು ಹಾಗೆ ಉಳಿದುಕೊಂಡಿದೆ ಎಂದಾದರೆ ಹೊಟ್ಟೆ ಉಬ್ಬರಕ್ಕೆ ಸಿಗುವ ಔಷಧಗಳನ್ನು ಪ್ರಯತ್ನಿಸಿ. ಹೊಟ್ಟೆ ಉಬ್ಬರಕ್ಕೆ ಸಿಗುವ ಜೀರ್ಣದ ಔಷಧಗಳು ತಕ್ಷಣ ಪರಿಹಾರ ನೀಡುತ್ತದೆ. Enoದಂತಹ ಕೆಲವೊಂದು ಪೌಡರ್ ಗಳು ಗ್ಯಾಸ್ ನಿಂದ ತಕ್ಷಣ ಪರಿಹಾರ ಒದಗಿಸುತ್ತದೆ