`ಹೊಟ್ಟೆಪಾಡು’ 25 ದಿನ ಪೂರ್ಣ

“ಹೊಟ್ಟೆಪಾಡು” ಚಿತ್ರ ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. .ಚಿತ್ರದ ಯಶಸ್ಸಿಗೆ ಕಾರಣರಾದ ತಂಡದವರನ್ನು ಸನ್ಮಾನಿಸಿದರು. ಹಿರಿಯ ನಿರ್ದೇಶಕ ಓಂಸಾಯಿಪ್ರಕಾಶ್ ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

ಡಿ.ವಿ.ರಾಧ  ನಿರ್ಮಿಸಿರುವ, ವಸಂತ್ ಸಂಗೀತ ನಿರ್ದೇಶನ, ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ ಚಿತ್ರ ಇದು.

ಈ ವೇಳೆ ವಸಂತ್, ನಾಯಕನಾಗುವ ಆಸೆ ಹೊತ್ತು ಇಪ್ಪತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದೆ. ಈಗ ಈಡೇರಿದೆ.ಕೆಲ ಕಾಲ ಚಿತ್ರರಂಗದಿಂದ ದೂರವಾಗಿ, ಬೇರೆ ವ್ಯಾಪಾರ ಶುರು ಮಾಡಿದೆ. ಏನೇ ಮಾಡಿದರೂ, ನಾನು ನಾಯಕನಾಗಬೇಕೆಂಬ ಆಸೆ ನನ್ನ ಬಿಟ್ಟು ಹೋಗಲಿಲ್ಲ. ನಂತರ ನಾವೇ ಈ ಸಿನಿಮಾ ಶುರು ಮಾಡಿದ್ದೆವು. ರಾಧ ಚಿತ್ರದ ನಿರ್ಮಾಪಕಿ.  ನಾನೇ ಸಂಗೀತ ನಿರ್ದೇಶನ ಹಾಗೂ ನಿರ್ದೇಶನ ಮಾಡಿದ್ದೇನೆ ಎಂದರು.

ನಿರ್ಮಾಪಕಿ ಡಿ.ವಿ.ರಾಧ ಎಲ್ಲರಿಗೂ ಧನ್ಯವಾದ ತಿಳಿಸಿದರು.  ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಹಾಗೂ ತಂತ್ರಜ್ಞರು “ಹೊಟ್ಟೆಪಾಡು” ಚಿತ್ರದ ಕುರಿತು ಮಾತನಾಡಿದರು.