ಹೊಟೇಲ್ ನೌಕರರಿಗೆ ಮತದಾನ ಅವಕಾಶ ಕಲ್ಪಿಸಲು ಮನವಿ

ಕಲಬುರಗಿ,ಮೇ 8: ದಿನಾಂಕ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಂದು ಹೊಟೇಲ್,ಬೇಕರಿ ಮತ್ತು ವಸತಿಗೃಹಗಳಲ್ಲಿ ಕೆಲಸ ಮಾಡುವ ನೌಕರರಿಗೆ ಮತದಾನ ಮಾಡಲು ಅವಕಾಶ ಒದಗಿಸುವಂತೆ ಕಲಬುರಗಿ ಹೋಟೆಲ್ ಬೇಕರಿ ಮತ್ತು ವಸತಿಗೃಹಗಳ ಮಾಲೀಕರ ಸಂಘ ಮನವಿ ಮಾಡಿದೆ.
ಎಲ್ಲ ನೌಕರಿಗೂ ಓಟು ಮಾಡುವ ಹಕ್ಕು ಇದ್ದು,ಸರಕಾರದ ಆದೇಶದ ಮೇರೆಗೆ ಅವರ ಹಕ್ಕು ಚಲಾಯಿಸಲು ಆಯಾ ಸಂಸ್ಥೆಯವರು ಅನುಕೂಲ ಮಾಡಿಕೊಡಬೇಕು.ಮತದಾನ ಮಾಡಲು ಅವಕಾಶ ಕಲ್ಪಿಸದಿದ್ದರೆ ಕಾನೂನು ಪ್ರಕಾರ ಆಯಾ ಸಂಸ್ಥೆ ಮಾಲೀಕರು ಶಿಕ್ಷೆಗೆ ಒಳಗಾಗುವ ಸಮಸ್ಯೆ ಇದ್ದ ಕಾರಣ ತಪ್ಪದೇ ಅವಕಾಶ ಮಾಡಿಕೊಡುವಂತೆ ಕಲಬುರಗಿ ಹೋಟೆಲ್ ಬೇಕರಿ ಮತ್ತು ವಸತಿಗೃಹಗಳ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಮೆಂಡನ್ ಅವರು ಮನವಿ ಮಾಡಿದ್ದಾರೆ.