ಹೊಟೇಲ್ ನಲ್ಲಿ ತಿಂಡಿ ಪಾರ್ಸೆಲ್ ಗೆ ಮಾತ್ರ ಅವಕಾಶ

ಕೊಟ್ಟೂರು 22.ಪಟ್ಟಣದ ತಾಲೂಕ ಕಛೇರಿಯ ಸಭಾಂಗಣದಲ್ಲಿ ಹೆಚ್. ಜಿ ಚಂದ್ರಶೇಖರಯ್ಯ ಸಹಾಯಕ ಆಯುಕ್ತರು, ಹರಪನಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಕೋವಿಡ್-19 ನಿಯಂತ್ರಣದ ಕುರಿತು ಸರ್ಕಾರ ನೀಡಿದ ಮಾರ್ಗಸೂಚಿಯನ್ನು ಮಾಲನೆ ಮಾಡುವ ಬಗ್ಗೆ ಸಭೆ ನಡೆಸಿದರು.
ಈ ಸಭೆಯಲ್ಲಿ ಈ ಕೆಳಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.
ಮೂರು ರೀತಿಯ ಕರ್ಪೂವನ್ನು ವಿಧಿಸಲಾಗಿದ್ದು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದರು. ಹೋಟಲ್, ಬೀದಿಬದಿ ಬಂಡಿ ಹೋಟಲ್ ಗಳು, ತಿಂಡಿ ಅಂಗಡಿಗಳು, ಬಾರ್ ಗಳು, ಡಾಬಾಗಳಲ್ಲಿ ಯಾವುದೇ ರೀತಿಯ ಕುಳಿತುಕೊಂಡು ಟೀ, ಉಪಹಾರ , ಊಟ ಸರಬರಾಜು ಮಾಡಲು ಅವಕಾಶ ಇಲ್ಲ. ಕೂಡಲೇ ಛೇರ್ ಗಳನ್ನು ತೆಗೆಯಬೇಕು. ಪಾರ್ಸಲ್ ಕೊಡಲು ಮಾತ್ರ ಅವಕಾಶ ಇದೆ. ಹೋಟಲ್ ಮಾಲೀಕರು ಹಾಗೂ ಪಾರ್ಸಲ್ ಕೊಡುವವರು ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು. ತಪ್ಪಿದಲ್ಲಿ ದಂಡ ವಿಧಿಸಲು ಎಂದು ತಿಳಿಸಿದರು.ತಹಶಿಲ್ದಾರ್ ಜಿ.ಅನಿಲ್ ಕುಮಾರ್, ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು