ಹೊಕೋಸಿನ ಪಲ್ಯ

ಬೇಕಾಗುವ ಸಾಮಗ್ರಿಗಳು
ಕಡಲೆಬೇಳೆ
ಹೂಕೋಸು
ಈರುಳ್ಳಿ
ಗರಂ ಮಸಾಲ
ಅಚ್ಚ ಕಾರದಪುಡಿ
ಹುಚ್ಚೆಳ್ಳು ಪುಡಿ
ಅರಿಶಿಣ ಪುಡಿ
ಉಪ್ಪು
ಒಗ್ಗರೆಣೆಗೆ
ಸಾಸಿವೆ,
ಜೀರಿಗೆ,
ಕರಿಬೇವು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಮೊದಲಿಗೆ ಹುಕೋಸನ್ನು ಬಿಡಿಸಿ ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಕುದಿಯುವ ನೀರಿಗೆ ಸ್ವಲ್ಪ ಅರಿಷಿಣಪುಡಿ ಅಥವಾ ಸ್ವಲ್ಪ ಉಪ್ಪು ಸೇರಿಸಿದರೂ ಆಯಿತು.

ಹೂಕೋಸಲ್ಲಿ ಸೇರಿದ್ದು ಹುಳಗಳು ಹೊರಬೀಳುತ್ತವೆ. ನಂತರ ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿರಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.

ಈರುಳ್ಳಿ ಬಳಸುವುದು ಬಿಡುವುದು ನಿಮಗೆ ಬಿಟ್ಟಿದ್ದು. ಬಳಸದಿದ್ದರೆ ರುಚಿಯೇನೂ ಕೆಟ್ಟುಹೋಗುವುದಿಲ್ಲ.

ನಂತರ ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಅರಿಷಿಣ, ಕರಿಬೇವು ಹಾಗು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ತಾಳಿಸಿಟ್ಟುಕೊಳ್ಳಿ.

ಅದಕ್ಕೆ ಬೇಯಿಸಿದ ಕಡಲೆಬೇಳೆ ಹಾಗು ಹೂಕೋಸನ್ನು ಸುರುವಿ ಗರಂ ಮಸಾಲ, ಹುಚ್ಚೆಳ್ಳು ಪುಡಿ, ಕಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ