ಹೊಂಡಾ ಕಂಪನಿಯಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ನಿರ್ಧಾರ

ಕೋಲಾರ,ಏ.೨೬:ಎಸ್‌ಎನ್‌ಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೊಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಸದ್ಯಕ್ಕೆ ಆಸ್ಪತ್ರೆಯಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ಇದ್ದು ಇನ್ನೊಂದು ಆಕ್ಸಿಜನ್ ಪ್ಲಾಂಟ್ ನ್ನು ಹೊಂಡಾ ಕಂಪನಿ ನಿರ್ಮಾಣ ಮಾಡಲು ಮುಂದೆ ಬಂದಿದೆ.
ಹತ್ತು ದಿನಗಳಲ್ಲಿ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದರು. ಜಿಲ್ಲೆಯಲ್ಲಿ ಕರೋನಾ ಸೊಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಂಸದರು ಕೋಲಾರದ ಎಸ್‌ಎನ್‌ಆರ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೊತೆ ಸಭೆ ನಡೆಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು ವೈದ್ಯರು ಕರೋನಾ ಸೊಂಕಿತರನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳಬೇಕಿದೆ, ರೆಮಿಡಿಸೇವರ್ ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು ಅವರಿಗೆ ಔಷಧಿ ಸಿಗುವ ಮೂಲ ಪತ್ತೆ ಹಚ್ಚಬೇಕಿದೆ.
ಇನ್ನೂ ಆಸ್ಪತ್ರೆಯ ಸ್ಟಾಪ್ ನರ್ಸ್ ಲಾಕ್ ಡೌನ್ ನಿಂದಾಗಿ ಕೆಲಸಕ್ಕೆ ಹೋಗಲು ಸಾರಿಗೆ ಸಮಸ್ಯೆ ಉಂಟಾಗಿದೆ ಎಂದು ಅಹವಾಲು ಕೊಟ್ಟಿದ್ದಾರೆ, ಜಿಲ್ಲೆಯ ವಿವಿಧ ಕಡೆಗಳಿಂದ ಬರುವ ಸಿಬ್ಬಂದಿಯನ್ನು ಕರೆತರಲು ಹಾಗೂ ಕರೆದುಕೊಂಡು ಹೋಗಲು ನಾನೇ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಡಲಾಗತ್ತದೆ ಎಂದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಇಲ್ಲ, ಜಿಲ್ಲೆಯಲ್ಲಿ ಸುಮಾರು ೧ ಲಕ್ಷ ೭೦ ಸಾವಿರಕ್ಕೂ ಹೆಚ್ಚು ಜನ ಕರೋನಾ ಲಸಿಕೆ ತೆಗೆದುಕೊಂಡಿದ್ದಾರೆ.
ಸದ್ಯ ೮ ಸಾವಿರ ಲಸಿಕೆ ಲಭ್ಯವಿದ್ದ ಇನ್ನೂ ಹೆಚ್ಚಿನ ಲಸಿಕೆ ಕೊಡಲೇ ಸರಬರಾಜು ಅಗಲಿದೆ ಎಂದು ತಿಳಿಸಿದರು. ಆರೋಗ್ಯ ಸಚಿವ ಸುಧಾಕರ್ ಜೊತೆ ಆಸ್ಪತ್ರೆಯಲ್ಲಿರುವ ನ್ಯೂನತೆಗಳ ಬಗ್ಗೆ ಚರ್ಚೆ ನಡೆಸಿದ್ದು ಇನ್ನೂ ನಾಲ್ಕು ಐದು ದಿನದಲ್ಲಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸುವವರು. ಕೊರೊನಾ ಬಗ್ಗೆ ಭಯಪಡದೇ ಜನರು ಧೈರ್ಯವಾಗಿ ಇರಬೇಕು ನಿರ್ಮಲ ಮಾಡದೇ ಮಾಸ್ಕ್, ಸ್ಯಾನಿಟ್ರೈಜರ್, ಸಾಮಾಜಿಕ ಅಂತರ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಕರೋನಾ ಮುಕ್ತ ಜಿಲ್ಲೆ ಮಾಡಲು ವೈದ್ಯರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು. ಇದೇ ವೇಳೆ ಆಸ್ಪತ್ರೆಯ ಆವರಣದಲ್ಲಿನ ಆಕ್ಸಿಜನ್ ಪ್ಲಾಂಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಂಡಾ ಕಂಪನಿ ಆಧಿಕಾರಿ ಜೊತೆ ಮತ್ತೊಂದು ಪ್ಲಾಂಟ್ ನಿರ್ಮಿಸಲು ಜಾಗ ವೀಕ್ಷಣೆ ನಡೆಸಿದರು.