ಹೊಂಡಕ್ಕೆ ಬಿದ್ದ ಲಾರಿ: ಮೂವರಿಗೆ ಗಾಯ 

ಬಂಟ್ವಾಳ, ನ.೨೦- ಇಂಟರ್ ಲಾಕ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಚಾಲಕ ಸಹಿತ ಮೂವರಿಗೆ ಗಾಯವಾದ ಘಟನೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಮಾರು ಗ್ರಾಮದ ಪುರುಷರಕೋಡಿ ಎಂಬಲ್ಲಿ ನಡೆದಿದೆ.  

ಲಾರಿ ಚಾಲಕ ಲಾರೆನ್ಸ್ ಪಿಂಟೋ, ಲಾರಿಯೊಳಗೆ ಇದ್ದ ಅಂಕಿತ್ ಕುಮಾರ್, ಹಾಗೂ ರಾಮ್ ಪ್ರವೀಶ್ ಕುಮಾರ್ ಅವರಿಗೆ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.