ಹೊಂಡಕ್ಕೆ ಬಿದ್ದು ಮೃತ್ಯು

ಕಾಸರಗೋಡು, ನ.೪- ಮೀನು ಸಾಕಣಾ ಕೇಂದ್ರದ ನೀರು ತುಂಬಿದ ಹೊಂಡಕ್ಕೆ ಬಿದ್ದು ನೌಕರನೋರ್ವ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಅಂಬಲತ್ತರದಲ್ಲಿ ನಡೆದಿದೆ. ಮೃತಪಟ್ಟವನನ್ನು ಕರ್ನಾಟಕ ಮೂಲದ ರೋಬಿನ್ ರಿಜುಲ್ (೩೩) ಎಂದು ಗುರುತಿಸಲಾಗಿದೆ. ಅಂಬಲತ್ತರದ ನಿವೃತ್ತ ಲೋಕೋಪಯೋಗಿ ಇಂಜಿನಿಯರ್‌ರೋರ್ವರ ಮಾಲಕತ್ವ ಮೀನು ಸಾಕಣಾ ಕೇಂದ್ರದಲ್ಲಿ ಘಟನೆ ನಡೆದಿದೆ.