“ಹೊಂಗಿರಣ ಫೌಂಡೇಶನವತಿಯಿಂದ ವಿಶ್ವರಂಗಭೂಮಿ ದಿನಾಚರಣೆ”

ಧಾರವಾಡ,ಏ2: ನಗರದ ಹೊಂಗಿರಣ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಸಹಯೋಗದಲ್ಲಿ ಇತ್ತೀಚೆಗೆ ಭಾವಸಾರ ಸಭಾ ಭವನದಲ್ಲಿ , ಹಿರಿಯ ರಂಗ ಕಲಾವಿದ, ರಂಗ ನಟಿ, ನಿರ್ದೇಶಕ, ರಂಗ ದಿಗ್ಗಜರಾದ ವಿಠ್ಠಲ್ ಕೊಪ್ಪದ ಹಾಗೂ ನಾರಾಯಣ ಹೃದಯಾಲದ ಎಸ್.ಡಿ.ಎಂ.ಆಸ್ಪತ್ರೆಯ ಹಿರಿಯ ತಜ್ಞ ವೈದ್ಯಾಧಿಕಾರಿಗಳಾದ ಡಾ.ವಿವೇಕಾನಂದ ಗಜಪತಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಂಗಿನಾಟ ವಿಠ್ಠಲ್ ಕೊಪ್ಪದ ಇವರು ಕರೋನಾ ಮಹಾಮಾರಿಯಿಂದ ರಂಗಭೂಮಿಯ ಕಲಾವಿದರು ಸಾಕಷ್ಟು ಸಂಕಷ್ಟ ಇದ್ದಾಗಲೂ ಕೂಡ ಕಲಾವಿದರು ಕಲೆಯನ್ನು ಜೀವಂತ ವಾಗಿ ಇಡುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ, ರಂಗಭೂಮಿಗೆ ಸಾಕಷ್ಟು ಆಯಾಮಗಳಿವೆ, ಈ ನಿಟ್ಟಿನಲ್ಲಿ ಕಲಾವಿದರು ಸಮಾಜಕ್ಕೆ ಮಾದರಿಯಾಗಿದ್ದು ಶ್ಲಾಘನೀಯ, ಅದೇ ರೀತಿ ಹೃದಯ ರೋಗ ತಜ್ಞ ವೈದ್ಯರಾದ ಬಾ.ವಿವೇಕಾನಂದ ಗಜಪತಿ ಹೊಂಗಿರಣ ಉಪನ್ಯಾಸ ಮಾಲಿಕೆಯಲ್ಲಿ ಹೃದಯ ಚಿಂತನೆ ವಿಷಯವಾಗಿ ತಮ್ಮ ಉಪನ್ಯಾಸದಲ್ಲಿ ಹೃದಯದ ಮೀಡಿತ-ತುಡಿತಗಳ ಕಾಳಜಿ ವಹಿಸುವ ನಿಟ್ಟಿನಲ್ಲಿ ಹೃದಯ ಚಿಂತನ-ಮಂಥನ, ಬೇಳೆಯುತ್ತಿರುವ ಅನಾರೋಗ್ಯದ ಹಿನ್ನೆಲೆಯಲ್ಲಿ ಹೃದಯ ಕಾಯಿಲೆಗಳ ಸಂಬಂಧಿ ಉಪನ್ಯಾಸ ನೀಡಿದರು.
ಫೌಂಡೇಶನ್ ಕಾರ್ಯದರ್ಶಿ ಗಳಾದ ರಾಜಕುಮಾರ ಝಿಂಗಾಡೆ ಯಾವುದು ವಿಶ್ವವ್ಯಾಪಿ ರಂಗಭೂಮಿಯ ಆಚರಣೆಯ ಸಂಸ್ಕ್ರುತಿಯನ್ನು ಮುಂದುವರೆಸಿಕೊಂಡು ಕಲೆಯಲ್ಲಿ ಸದಾ ಹೊಸತನ ಕಾಣುವ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಬಿ.ಸುರೇಶ ಅನುವಾದಿಸಿದ ರಂಗ ಸಂದೇಶವನ್ನು ಫೌಂಡೇಶನ್ ಖಜಾಂಚಿ ಸದಾಶಿವನಗೌಡ ಕಬ್ಬೂರ ವಾಚಿಸಿದರು ಅಧ್ಯಕ್ಷ ಡಾ.ಎಂ.ಎಂ.ದಾಮೋದರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ರಮೇಶ್ ಸುಲಾಖೆ ಪ್ರಾರ್ಥಿಸಿ, ಪರಿಚಯಿಸಿದರು, ನಾಗವೇಣಿ ಸುಲಾಖೆ ವಂದಿಸಿದರು ಫೌಂಡೆಶನ್ ಖಜಾಂಚಿ ವಿಠ್ಠಲ್ ಬಸಲಿಗುಂದಿ ಕಾರ್ಯಕ್ರಮ ನಿರೂಪಿಸಿದರು. ಉಳಿದಂತೆ, ಫೌಂಡೇಶನ್ ಪದಾಧಿಕಾರಿಗಳಾದ ವೆಂಕಟೇಶ್ ಜಾಧವ್, ಗೀತಾ ಝಿಂಗಾಡೆ, ಶ್ರೀಹರಿ ಟಿಕಾರೆ, ವಿನಾಯಕ ಪತಂಗೆ ಉಪಸ್ಥಿತರಿದ್ದರು.