ಹೈ.ಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ ಎರಡನೇ ಬಾರಿ ರಜನಿಶ್ ವಾಲಿ ಆಯ್ಕೆ ಅಭಿನಂದನೆ

ಬೀದರಃಮಾ.19: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ರಜನಿಶ್ ವಾಲಿ ಅವರಿಗೆ ಸೂರ್ಯ ನಮಸ್ಕಾರ ಸಂಘ, ಹಾಗೂ ನವೀನ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ಬೀದರನ ವತಿಯಿಂದ ವಾಲಿಯವರ ನಿವಾಸದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ರಜನೀಶ ವಾಲಿಯವರು ನಾನು ಎರಡನೇ ಬಾರಿ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ ಆಯದ್ಕೆಯಾಗಿರುವುದು ಸಂತಸ ತಂದಿದೆ. ಇದಕ್ಕೆ ತಮ್ಮೆಲ್ಲರ ಪ್ರೀತಿ ವಿಶ್ವಾಸವೇ ಕಾರಣ. ಸಂಸ್ಥೆ ನನ್ನ ಮೇಲಿಟ್ಟಿರುವ ಜವಾಬ್ದಾರಿ ಸವಥರ್Àವಾಗಿ ನಿಭಾಯಿಸುವೆ, ಹಾಗೂ ಸಂಸ್ಥೆಯು ನನಗೆ ನೀಡಿದ ಈ ಸೇವೆಯ ಅವಕಾಶಕ್ಕೆ ಧನ್ಯವದಗಳನ್ನು ತಿಳಿಸುತ್ತಾ ಸಂಸ್ಥೆಗೆ ಹಾಗೂ ಬೀದರ ಜಿಲ್ಲೆಗೆ ಉತ್ತಮ ಕೀರ್ತಿ ತರುವುದಾಗಿ ತಿಳಿಸಿದರು.
ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕ್ಕಬಸೆ ಅವರು ಮಾತನಾಡಿ, ರಜನೀಶ ವಾಲಿಯವರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಇದಾಗಿದೆ. ಎಂದು ಹರ್ಷ ವ್ಯಕ್ತಪಡಿಸಿದರು. ಸಂಘದ ಪದಾಧಿಕಾರಿಗಳಾದ ರಾಜಕುಮಾರ ಮಂಗಲಗಿ, ಶ್ರೀಧರ ಜಾಧವ, ಜಿ. ಎಂ. ಮಕಾಲೆ, ವಿನೀತ್ ಪಸಾರ್ಗೆ, ಭದ್ರು ಸ್ವಾಮಿ, ಉಪಸ್ಥಿತರಿದ್ದು ವಾಲಿಯವರಿಗೆ ಶುಭ ಕೋರಿದರು.