ಹೈ. ಕ. ಶಿಕ್ಷಣ ಸಂಸ್ಥೆಯ, ವಿ.ಜಿ.ಮಹಿಳಾ ಕಾಲೇಜಗೆ ಮೂರು ರ್ಯಾಂಕ್

ಕಲಬುರಗಿ:ಫೆ.25:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇವರು ನಡೆಸಿದ 2022-23 ನೇ ಶೈಕ್ಷಣಿಕ ಸಾಲಿನ ಎಂ.ಎಸ್ಸಿ.(ಒ.Sಛಿ) ಭೌತಶಾಸ್ತ್ರ ಪರೀಕ್ಷೆಯಲ್ಲಿ ಕುಮಾರಿ.ಹೋಮಾಯಿ ಇರಾನಿ ಹಾಗೂ ಕುಮಾರಿ. ಸುಮನ್ ಮಲ್ಕಣ್ಣವರ್ ಕ್ರಮವಾಗಿ 4 ಮತ್ತು 5 ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ ಮತ್ತು ಪದವಿ ವಿಭಾಗದಲ್ಲಿ ಬಿ.ಎಸ್ಸಿ ಅಂತಿಮ ವರ್ಷದ ಕುಮಾರಿ. ಸಯ್ಯದಾ ರುಖಯ್ಯ ಬೀ ಬೀ 5 ನೇ ಖಚಿಟಿಞ ಪಡೆದುಕೊಂಡು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಹೈ.ಕ.ಶಿ.ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ ,ಉಪಾಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಹಾಗೂ ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಗಾಗಿ ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ ತಿಳಿಸಿದ್ದಾರೆ.