ಹೈ.ಕ.ವಿಮೋಚನೆಯ `ವೀರಪುರುಷ ಚನ್ನಬಸಪ್ಪ ಕುಳಗೇರಿ’ ಅಭಿಮಾನಿಗಳ ಸಭೆ

ಕಲಬುರಗಿ.ಸೆ.16: ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ವೀರಪುರುಷ ಶ್ರೀ ಚನ್ನಬಸಪ್ಪ ಕುಳಗೇರಿ ಅವರ ಕುರಿತಾದ ಬೃಹತ್ ಸಂಪುಟವನ್ನು ಲೋಕಾರ್ಪಣೆಗೊಳಿಸುವ ಸಮಾರಂಭದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳ ಸಭೆಯನ್ನು ಶನಿವಾರ ಸೆ. 17 ರಂದು ಸಂಜೆ 5 ಕ್ಕೆ ಕರೆಯಲಾಗಿದೆ ಎಂದು ಗ್ರಂಥದ ಸಂಪಾದಕರು ಮತ್ತು ಹಿರಿಯ ಸಾಹಿತಿಗಳಾದ ಏ.ಕೆ.ರಾಮೇಶ್ವರ ತಿಳಿಸಿದ್ದಾರೆ.
ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆಯ ಎದುರುಗಡೆ ಇರುವ ಸಿದ್ದಿಪ್ರಿಯ ಹೋಟೆಲ್‍ದಲ್ಲಿ ಸಭೆ ಕರೆಯಲಾಗಿದ್ದು, ಈ ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಜೇವರ್ಗಿಯ ಶಾಸಕರಾದ ಡಾ.ಅಜಯಸಿಂಗ್ ವಹಿಸುವರು. ಸಮಿತಿಯ ಕಾಯಾಧ್ಯಕ್ಷರಾದ ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ ಮತ್ತು ದೊಡ್ಡಪ್ಪಗೌಡ ಪಾಟೀಲ ನರಬೋಳ ಉಪಸ್ಥಿತರಿರುವರು.
ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಲಿಂಗರಾಜಪ್ಪ ಬಿ.ಅಪ್ಪ, ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ, ಶಹಾಪುರ ಶಾಸಕರಾದ ಶರಣಬಸಪ್ಪ ದರ್ಶನಾಪುರ, ವಿಧಾನ ಪರಿಷತ್ತಿನ ಸದಸ್ಯರಾದ ಶಶೀಲ್ ನಮೋಶಿ, ಮಾಜಿ ಉಪಸಭಾಪತಿಗಳಾದ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಎಚ್‍ಕೆಇ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಮಾನಕರ್, ಮಾಜಿ ಸಚಿವರಾದ ಎಸ್.ಕೆ.ಕಾಂತಾ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಅಶೋಕ ವಿದ್ಯಾಧರ ಗುರೂಜಿ ಹಾಗೂ ಶಿವನಗೌಡ ಪಾಟೀಲ ಕಲ್ಲಹಂಗರಗಿ, ಅಮರನಾಥ ಚನ್ನಬಸಪ್ಪ ಕುಳಗೇರಿ ಅವರು ಈ ಸಭೆಯಲ್ಲಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.