ಚಿಟಗುಪ್ಪ,ಜು.26-ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದರ ಜೊತೆಗೆ ಹೈವೋಲ್ಟೇಜ್ ವಿದ್ಯುತ್ ನಿಂದಾಗಿ ಸುಮಾರು 15 ಮನೆಗಳಲ್ಲಿನ ಕರೆಂಟ್ ಆಧಾರಿತ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬರುವ ಹೊನ್ನಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಕರೆಂಟ್ ಸ್ಪಾರ್ಕ್ ಆಗುತ್ತಿರುವುದನ್ನು ಗಮನಿಸಿ ಈ ವಿಷಯವನ್ನು ಗ್ರಾಮಸ್ಥರು ಗ್ರಾಮದ ಲೈನ್ ಮೆನ್ ಗಮನಕ್ಕೆ ತಂದರೂ ಅವರು ಈ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈ ವೋಲ್ಟೇಜ್ ಕರೆಂಟ್‍ನಿಂದಾಗಿ ಮನೆಯಲ್ಲಿದ್ದ ಟಿವಿ ಮತ್ತು ಫ್ಯಾನ್ ಸುಟ್ಟು ಹೋಗಿವೆ ಎಂದು ಗ್ರಾಮದ ಸುಖೀರ್ಥ, ಶಿಲ್ಪ ಹಾಗೂ ಅನೇಕರು ತಿಳಿಸಿದ್ದಾರೆ.
ಟ್ರಾನ್ಸ್ಪರಮ್ ಹಾಗೂ ವಿದ್ಯುತ್ ವೈರನ್ನು ಬೇರೆ ಕಡೆ ಊರಿನ ಹೊರಗಡೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.