
ಅಥಣಿ :ಎ.11: ಸಾರ್ವಜನಿಕರಲ್ಲಿ ಭಯದ ವಾತಾವರಣ ಹೋಗಲಾಡಿಸಿ ಭಯಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ, ಅದಕ್ಕಾಗಿ ಕೇಂದ್ರ ಸಶಸ್ತ್ರ ಸೀಮಾಬಲ ಪಡೆಯ ಯೋಧರು ಆಗಮಿಸಿರುವುದು ಭದ್ರತೆ ವ್ಯವಸ್ಥೆಯಲ್ಲಿ ಮತ್ತಷ್ಟು ಬಲ ಬಂದಿದೆ ಎಂದು ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಅವರು ಹೇಳಿದರು.
ಅವರು ಮತಕ್ಷೇತ್ರದ ಚುನಾವಣಾ ಭದ್ರತೆಗೆ ಆಗಮಿಸಿದ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿಗಳನ್ನ ಸ್ವಾಗತಿಸಿ ಮಾತನಾಡಿದರು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ನಿರ್ಭೀತಿಯಿಂದ ಮತದಾನ ಮಾಡಬೇಕು, ಸಾರ್ವಜನಿಕರು ರಕ್ಷಣೆಗೆ ನಾವಿದ್ದೇವೆ ಕಾನೂನು ಸುರಿಸಿ ಕಾಪಾಡುವುದು ಶಾಂತತೆಯಿಂದ ನ್ಯಾಯ ಸಮ್ಮತ ಚುನಾವಣೆ ಹಾಗೂ ಮತದಾನ ನಡೆಯಬೇಕೆನ್ನುವ ಸಂದೇಶದೊಂದಿಗೆ ಈ ಪಥಸಂಚಲನ ನಡೆಸಿದ್ದೇವೆ ಎಂದರು,
ನಂತರ ಅಥಣಿ ಪಿಎಸ್‍ಐ ಶಿವಶಂಕರ ಮುಕರಿ ಮಾತನಾಡಿ, ಕೇಂದ್ರ ಸಶಸ್ತ್ರ ಸೀಮಾ ಬಲದ 90ಸಿಬ್ಬಂದಿ ಭದ್ರತೆ ಕಾರ್ಯಕ್ಕೆ ಆಗಮಿಸಿದ್ದಾರೆ. ಕೆಎಸ್‍ಆರ್‍ಪಿ 40 ಸಿಬ್ಬಂದಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮದಬಾವಿ ಮತ್ತು ಬಳ್ಳಿಗೇರಿಯಲ್ಲಿ ಚೆಕ್ ಪೆÇೀಸ್ಟ್‍ಗಳನ್ನು ತೆರೆಯಲಾಗಿದ್ದು, ಚುನಾವಣೆ ವೇಳೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರು ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸದೆ ಒಳ್ಳೆಯ ರೀತಿಯಲ್ಲಿ ಗೌರವದಿಂದ ನಡೆದುಕೊಳ್ಳಬೇಕು. ಏನಾದರೂ ತಂಟೆ ತಕರಾರು ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಸೀಮಾಬಲ ತಂಡದ ಅಸಿಸ್ಟೆಂಟ್ ಕಮಾಂಡರ್ ಎ.ಎಂ.ಪಂಡಿತ ಮಾತನಾಡಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಾವು ಸೇವೆ ಸಲ್ಲಿಸಿದ್ದೇವೆ. ಎಲ್ಲೆಡೆಯಂತೆ ಅಥಣಿ ಪಟ್ಟಣದಲ್ಲೂ ನಮಗೆ ಅದ್ದೂರಿ ಸ್ವಾಗತ ನೀಡಿರುವುದು ಖುಷಿ ತಂದಿದೆ ಎಂದು ಹೇಳಿದರು.
ಆಕರ್ಷಕ ಪಥ ಸಂಚಲನ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಥಣಿ ಸಿಪಿಐ ರವೀಂದ್ರ ನಾಯ್ಕಡಿ ನೇತೃತ್ವದಲ್ಲಿ ಪೆÇಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ ಶಿವಯೋಗಿ ವೃತ್ತ, ಚೆನ್ನಮ್ಮ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ಬೀದಿಯಲ್ಲಿ ಹಾಯ್ದು ಬುಧವಾರ ಪೇಟ್, ಹನುಮಾನ ಮಂದಿರ ಮಾರ್ಗವಾಗಿ ಬಸವೇಶ್ವರ ವೃತ್ತ, ಡಿ.ಬಿ.ಪವಾರ ದೇಸಾಯಿ ವೃತ್ತದ ಮೂಲಕ ಹಾಯ್ದು ಪೆÇಲೀಸ್ ಠಾಣೆ ಆವರಣದಲ್ಲಿ ಸಂಪನ್ನಗೊಂಡಿತು,
ಯೋಧರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ: ಚುನಾವಣೆಯ ಸುವ್ಯವಸ್ಥೆ ಕಾಪಾಡಲು ಪಟ್ಟಣಕ್ಕೆ ಆಕರ್ಷಕ ಪಥಸಂಚಲನ ನಡೆಸಿದ ಪೆÇೀಲೀಸ್ ಅಧಿಕಾರಿಗಳಿಗೆ, ಕೇಂದ್ರ ಸಶಸ್ತ್ರ ಸೀಮಾಬಲ ಪಡೆಯ ಯೋಧರಿಗೆ ಹಾಗೂ ಕೆಎಸ್‍ಆರ್‍ಪಿ ಯೋಧರಿಗೆ ಮಾರ್ಗ ಮಧ್ಯದಲ್ಲಿ ಸಮಾಜ ಸೇವಕರಾದ ಕಲ್ಲೇಶ್ ಮಡ್ಡಿ, ಮಹಾಂತೇಶ ಬಾಡಗಿ ಹಾಗೂ ಮಂಜು ಹೋಳಿಕಟ್ಟಿ ಸೇರಿದಂತೆ ಇನ್ನಿತರರು ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಿಸಿದರು
ಈಸಂದರ್ಭದಲ್ಲಿ ಅಸಿಸ್ಟೆಂಟ್ ಕಮಾಂಡರ್ ಪ್ರತೀಕ ಸಾವಂತ, ಐಗಳಿ ಪೆÇಲೀಸ್ ಠಾಣೆ ಪಿಎಸ್‍ಐ ಪವಾರ, ಹೆಚ್ಚುವರಿ ಪಿಎಸ್‍ಐಗಳಾದ ಲಕ್ಷ್ಮಿ ಬಿರಾದಾರ, ಚಂದ್ರಶೇಖರ ಸಾಗನೂರ.ಲಕ್ಷ್ಮಿ ದಿಡಗಿನಹಾಳ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಟಿಕೆಟ್‍ಗಾಗಿ ಮುಸುಕಿನ ಗುದ್ದಾಟ ನಡೆದಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಅಥಣಿ ಮತಕ್ಷೇತ್ರ ಹೈ ವೋಲ್ಟೇಜ್ ಅಖಾಡವಾಗಿ ಗುರುತಿಸಿಕೊಳ್ಳುತ್ತಿದೆ. ಪರಿಣಾಮ ಇಲ್ಲಿ ಶಾಂತಿ ಸುವ್ಯವಸ್ಥೆಗೆ ಹೆಚ್ಚಿನ ಭದ್ರತಾ ಸಿಬ್ಬಂದಿ ಅಗತ್ಯತೆಯನ್ನು ಮನಗಂಡ ಸರ್ಕಾರ / ಚುನಾವಣಾ ಆಯೋಗ ಪೆÇಲೀಸರ ಜತೆಗೆ ಸಶಸ್ತ್ರ ಮೀಸಲು ಪೆÇಲೀಸ್ ಪಡೆ ಹಾಗೂ ಬಿಎಸ್‍ಎಫ್ ಯೋಧರನ್ನು ನೇಮಿಸುವ ಮೂಲಕ ಗಮನ ಸೆಳೆದಿದೆ.