ಹೈಮಾಸ್ಕ್ ದೀಪ ಉದ್ಘಾಟನೆ

ಕೋಲಾರ,ಮಾ.೨೫: ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಜಿಲ್ಲಾ ಪಂಚಾಯ್ತ್ ಸದಸ್ಯ ನಂಜುಡಪ್ಪ ಅವರು, ಹೈಮಾಸ್ಟ್ ದೀಪವನ್ನ ಉದ್ಘಾಟನೆ ಮಾಡಿದರು.
ಸುಗಟೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚಿಟ್ಣಹಳ್ಳಿ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ ಮಾಡಲಾಯಿತು.ಜಿಲ್ಲಾ ಪಂಚಾಯ್ತ್ ಕ್ಷೇತ್ರದ ತೊಟ್ಲಿ, ಶೆಟ್ಟಿಮಾದಮಂಗಲ, ಸುಗಟೂರು, ಕಾಕಿನೆತ್ತ, ಮದನಹಳ್ಳಿ ಸೇರಿದಂತೆ ಐದು ಗ್ರಾಮಗಳಲ್ಲಿ ಹೈಮಾಸ್ಟ್ ದೀಪಗಳು ಮಂಜೂರಾಗಿ ಜಿಯೋ ಟ್ಯಾಗ್ ಮುಗಿದಿದ್ದು,ಉದ್ಘಾಟನೆಗೆ ಸಿದ್ದಗೊಳ್ಳುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ತೊಟ್ಲಿ ಮಂಡಲ್ ಪಂಚಾಯಿತಿಯ ಮಾಜಿ ಪ್ರಧಾನರಾದ ಮುನಿರೆಡ್ಡಿ, ಸದಸ್ಯರಾದ ಚಿಟ್ಣಹಳ್ಳಿ ಅನಿತಚೌಡರಡ್ಡಿ, ಪ್ರಿಯಾಂಕಾ ಆಂಜಿನಪ್ಪ, ಕಿತ್ತಂಡೂರು ಗ್ರಾಮದ ಮಂಜುನಾಥ,ಸರಸ್ವತಿ ಅಶೋಕ್ ಕುಮಾರ್ ,ಕಾಕಿನೆತ್ತ ಜನಾರ್ದನ್,ಉರಟಿ ಅಗ್ರಹಾರ ಸುಶೀಲಮ್ಮ ಕೃಷ್ಣಪ್ಪ,ಹಾಗೂ ಯುವ ಮುಖಂಡರಾದ ಆಲೇರಿ ಸೊಣ್ಣೇಗೌಡ,ಮಟ್ಣಹಳ್ಳಿ ಯಳ್ಳೇಗೌಡ,ಚಿಟ್ಣಹಳ್ಳಿ ಸುಬ್ರಮಣಿ ಮುಂತಾದವರು ಪಾಲ್ಗೊಂಡಿದ್ದರು.