ಹೈನೋದ್ಯಮ: ಜೂ. 1 ರಂದು ಆನ್ಲೈನ್ ತರಬೇತಿ

ಬೀದರ:ಮೇ.30: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಜೂನ್ 1ರಂದು ಬೆಳಿಗ್ಗೆ 11ಕ್ಕೆ ‘ಆರೋಗ್ಯವಂತ ಹಾಗೂ ಸಂಪದ್ಭರಿತರಾಗಲು ಹೈನು ಉದ್ಯಮ’ ಕುರಿತು ಆನ್‍ಲೈನ್‍ನಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹರಿಯಾಣದ ಹಿಸಾರ್‌ನ ಹೈನು ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶರಣಗೌಡ ಬಿ, ಕಲಬುರ್ಗಿಯ ಮಹಮ್ಮದ್ ಜಿಯಾವುಲ್ಲಾ, ಕಲಬುರ್ಗಿ- ಬೀದರ್- ಯಾದಗಿರಿ ಹಾಲು ಒಕ್ಕೂಟ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಆಸಕ್ತ ರೈತರು ಗೂಗಲ್ ಮೀಟ್ ಲಿಂಕ್ https://meet.google.com/sxy-vueh-uzd ಬಳಸಿ ತರಬೇತಿಯಲ್ಲಿ ಭಾಗವಹಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ
ಎನ್.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.