ಹೈನುಗಾರಿಕೆಯ ಲಾಭದ ಕುರಿತು ಜನರಿಗೆ ಮನವರಿಕೆ ಮಾಡಿ: ಬಲರಾಮ ಲಮಾಣಿ

ವಿಜಯಪುರ, ಏ.4-ಪ್ರಸ್ತುತ ಜಿಲ್ಲೆಯಲ್ಲಿ ನೀರಿನ ಸೌಲಭ್ಯ ಉತ್ತಮವಾಗಿದ್ದು, ಬೇಸಿಗೆಯಲ್ಲಿಯೂ ಕೂಡ ನೀರು ಉತ್ತಮವಾಗಿರುವುದರಿಂದ ದನಕರುಗಳಿಗೆ ಮೇವು ಮತ್ತು ಆಹಾರದ ಸಮಸ್ಯೆವಾಗಲಾರದು. ಇದರ ಸದುಪಯೋಗವನ್ನು ಪಡೆಯಲು ಪಶುಗಳ ಲಾಲನೆ-ಪಾಲನೆ, ಹೈನುಗಾರಿಕೆ, ಹಾಲು ಉತ್ಪಾದನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಹೇಳಿದರು.
ನಗರದ ರುಡ್‍ಸೆಟ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ , ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಕಾರ್ಯಕ್ರಮ ಹಾಗೂ ಪಶುಪಾಲನಾ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪಶುಪಾಲನೆಯಿಂದಾಗುವ ಆರ್ಥಿಕ ಲಾಭದ ಬಗ್ಗೆ ಇರುವಂತಹ ಹಲವಾರು ಯೋಜನೆಗಳ ಬಗ್ಗೆ ತಿಳಿಹೇಳಬೇಕು. ಸದುಪಯೋಗವನ್ನು ಪಡೆದುಕೊಳ್ಳಲು ಮನವರಿಕೆ ಮಾಡುವಂತೆ ಅವರು ಸಲಹೆ ನೀಡಿದರು.
ಶ್ರೀಮತಿ ಪ್ರತಿಭಾ ಪಾಟೀಲ್, ಅಧ್ಯಕ್ಷರು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಜಿಲ್ಲಾ ಪಂಚಾಯತ್ ಅವರು ಮಾತನಾಡಿ ಪ್ರಧಾನಮಂತ್ರಿ ಆತ್ಮ ನಿರ್ಭರ ಭಾರತದಲ್ಲಿ ಬರುವ ಪ್ರತಿಯೊಂದು ಯೋಜನೆಯ ಬಗ್ಗೆ ಅರಿವು ಮೂಡಿಸಲಾಗುವುದು. ಇದರ ಸದುಪಯೋಗಕ್ಕೆ ಸಲಹೆ ನೀಡಿದರು.
ಕೆನರಾ ಬ್ಯಾಂಕ್ ನ ಪ್ರಾದೇಶಿಕ ಅಧಿಕಾರಿ ಸೋಮನಗೌಡ ಐನಾಪುರ್ ಮಾತನಾಡಿ ಹಾಲು ಉತ್ಪಾದನೆ ಜಿಲ್ಲೆಯಲ್ಲಿ ಹೆಚ್ಚು ಇರುವುದರಿಂದ ಇನ್ನಷ್ಟು ಉತ್ತೇಜಿಸಲು ಸರ್ಕಾರದಿಂದ ಬರುವ ಯೋಜನೆಗಳಡಿ ಬ್ಯಾಂಕು ಮೂಲಕ ಕೂಡ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಪ್ರಾಣೇಶ್ ಜಹಗೀರ್ ದಾರ್ ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಜಯಪುರ, ಶ್ರೀಮತಿ ಭಾರತಿ ಬಿದರಿ ಮಠ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ,ರಾಜೇಂದ್ರ ಜೈನಾಪುರ. ಮಲ್ಲಿಕಾರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು