ಹೈನುಗಾರಿಕೆಯಿಂದ ಸ್ವಾವಲಂಬನೆಯುತ ಜೀವನ ಸಾಧ್ಯ

ಕಲಬುರಗಿ:ಜೂ.1: ರೈತರು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದರೆ ಪ್ರಕೃತಿ ಏರಿಳತಗಳಿಂದ ನಿರಿಕ್ಷಿತ ಫಸಲು ಪಡೆಯದೆ ನಷ್ಟವಾಗುತ್ತದೆ. ಕೃಷಿ ಜೊತೆಗೆ ಪೂರಕ ಕಸಬಾದ ಹೈನುಗಾರಿಕೆಯು ನಷ್ಟದ ಸಂದರ್ಭದಲ್ಲಿ ಸಹಾಯವಾಗುತ್ತದೆ. ಹೈನುಗಾರಿಕೆಯ ನಿರ್ವಹಣೆ ಬಗ್ಗೆ ನಿರ್ಲಕ್ರ್ಷ ವಹಿಸದೆ, ಮಾಡುವುದರಿಂದ ಸ್ವಾವಲಂಭನೆಯುತ ಜೀವನ ಸಾಗಿಸಲು ಸಾಧ್ಯವಿದೆಯೆಂದು ಹೈನೋದ್ಯಮಿ ಬಸವಂತರಾಯ ಎಸ್. ಕಡ್ಲಾ ಹೇಳಿದರು.

   ವಿಶ್ವ ಕ್ಷೀರ ದಿನಾಚರಣೆ ಪ್ರಯುಕ್ತ ಕಳೆದ ಅನೇಕ ವರ್ಷಗಳಿಂದ ಹೈನುಗಾರಿಕ ಮೂಲಕ ಬದುಕು ಕಟ್ಟಿಕೊಂಡ  ತಮಗೆ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ನಗರದ ಆಳಂದ ರಿಂಗ ರಸ್ತೆಯಲ್ಲಿರುವ ಮಂಗಳವಾರ ಜರುಗಿದ ಗೃಹ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

  ಹೈನುಗಾರಿಕೆ ಮಾಡುವುದು ಇಂದಿನ ದಿವಸಗಳಲ್ಲಿ ಕಷ್ಟದಾಯಕವಾಗಿದೆ. ಡೈರಿಗಳ ಸ್ಥಾಪನೆ ಹೈನುಗಾರಿಕೆಗೆ ಪೂರಕವಾಗಿದೆ. ಆದರೆ ಮೇವಿನ ಲಭ್ಯತೆ ಕಡಿಮೆಯಾಗಿ, ಬೆಲೆ ಹೆಚ್ಚಾಗಿದೆ. ಸಾಕಾಣಿಕೆಗೆ ಸ್ಥಳ ಸೇರಿದಂತೆ ಇತರೆ ಸಮಸ್ಯೆಗಳುಂಟಾಗುತ್ತವೆ. ಆದರೂ ಕೂಡಾ ಇವೆಲ್ಲವನ್ನು ಮೆಟ್ಟಿನಿಂತು ಹೈನುಗಾರಿಕಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹೈನುಗಾರಿಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆಯಲಿಯೆಂದರು.

   ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಹಾಲು ಅಮೃತಕ್ಕೆ ಸಮಾನ. ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವಾಗಿದೆ. ವಿಶ್ವದಲ್ಲಿಂದಿಗೂ ಕೂಡಾ ಅನೇಕ ಮಕ್ಕಳು ಹಾಲಿನ ಲಭ್ಯತೆಯಿಂದ ವಂಚಿತರಾಗಿ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆಯನ್ನು ನೀಡಿ ಹಾಲಿನ ಉತ್ಪಾದಕತೆಯನ್ನು ವೃದ್ಧಿಗೊಳಿಸುವದರ ಜೊತೆಗೆ, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಗತ್ಯವಾಗಿದೆಯೆಂದು ನುಡಿದರು.

  ಕೃಷಿ ಪೂರಕ ಚಟುವಟಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಕಳೆದ ನಾಲ್ಕು ದಶಕದಿಂದ ಭಾರತ ಹೈನುಗಾರಿಕೆ ಕೇತ್ರದ ಕಾರ್ಯನಿರ್ವಹಣೆ ತುಂಬಾ ಪ್ರಭಾವಶಾಲಿಯಾಗಿದೆ. 1960-2002ರ ಅವಧಿಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿ 'ಶ್ವೇತ ಕ್ರಾಂತಿ'ಯಾಗಿದ್ದರ ಫಲವಾಗಿ ಭಾರತ ಇಂದು ಇಡೀ ವಿಶ್ವದಲ್ಲಿಯೇ ಹಾಲಿನ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿರುವದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ವಿಶ್ವ ಮಟ್ಟದಲ್ಲಿ ನಾರ್ಮನ್ ಡಿ.ಬೋರ್ಲಾಗ್ ಮತ್ತು ರಾಷ್ಟ್ರಮಟ್ಟದಲ್ಲಿ ಡಾ.ವರ್ಗಿಸ್ ಕುರಿಯನ್ ಅವರ ಕೊಡುಗೆ ಮರೆಯುವಂತಿಲ್ಲವೆಂದರು.

ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಾ ಸ್ವಾಮಿ ಹೊದಲೂರ, ದೇವಿಂದ್ರಪ್ಪ ಗಣಮುಖಿ, ರಾಜಕುಮಾರ ಬಟಿಗೇರಿ, ಬಂಡಪ್ಪ ದೇಗಾಂವ, ಸಂಜೀವಕುಮಾರ ಪಾಟೀಲ್, ಮಹ್ಮದ ಇಸ್ಮಾಯಿಲ್ ಇತರರಿದ್ದರು.