ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಡಾ. ರಜನೀಶ ವಾಲಿಯವರಿಗೆ ಸನ್ಮಾನ

ಬೀದರ : ಎ.17: ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಡಾ|| ರಜನೀಶ ವಾಲಿಯವರಿಗೆ ಸನ್ಮಾನ ಕಾರ್ಯಕ್ರಮ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತಾವಿಕ ಹಾಗೂ ಸ್ವಾಗತ ನುಡಿಯನ್ನು ನುಡಿಯುತ್ತಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಕೆ. ಸಾತನೂರ ಅವರು ಮಾನ್ಯ ಆಡಳಿತ ಮಂಡಳಿಯ ಸದಸ್ಯರನ್ನು ಎಲ್ಲರಿಗೆ ಪರಿಚಯಿಸುತ್ತಾ ಡಾ|| ರಜನೀಶ ವಾಲಿ ಅವರು ಯುವ ಉತ್ಸಾಹಿ ನಾಯಕರು, ಅವರು ಸಾಮಾಜ ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಶಿಕ್ಷಣದ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದವರಾಗಿದ್ದು ಅವರ ಹೊಸ ಕನಸುಗಳೊಂದಿಗೆ ಈ ಸಂಸ್ಥೆಯ ಏಳಿಗೆಗಾಗಿ ಶ್ರಮಿಸುವರೆಂದು ಆಶೀಸುತ್ತಾ ಈ ಸಂಸ್ಥೆಯೊಂದಿಗೆ ಅವರ ಇಡಿ ಕುಟುಂಬ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹೇಳುತ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲರೆನ್ನು ತುಂಬು ಹೃದಯದಿಂದ ಸ್ವಾಗತವನ್ನು ಕೋರಿದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶಿಕ್ಷಣದ ಸಮೂಹದ ಎಲ್ಲಾ ಮುಖ್ಯಸ್ಥರ ವತಿಯಿಂದ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಆತ್ಮಿಯ ಸನ್ಮಾನ ನೆರವೇರಿಸಲಾಯಿತು.

ಸನ್ಮಾನಿತರ ಬಗ್ಗೆ ಹಿತನುಡಿಯನ್ನು ನುಡಿಯುತ್ತಾ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆಯವರು ನಮ್ಮ ಮಾನ್ಯ ಆಡಳಿತ ಮಂಡಳಿ ಸದಸ್ಯರು ಸರಳ ಸಜ್ಜನಿಕೆಗೆ ಹೆಸರಾದವರು ಪ್ರತಿಷ್ಠಿತ ವಾಲಿ ಕುಟುಂಬದಲ್ಲಿ ಜನಿಸಿದರು ಜನಾನುರಾಗಿಗಳಾಗಿದ್ದಾರೆ ಅವರಂತಹ ಯುವ ನಾಯಕರು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿದಕ್ಕೆ ಹರ್ಷ ವ್ಯಕ್ತಪಡಿಸಿದರು.

ಗೌರವ ಸನ್ಮಾನವನ್ನು ಸ್ವೀಕರಿಸಿದ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಾನ್ಯ ಡಾ|| ರಜನೀಶ ವಾಲಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಹಾವಿದ್ಯಾಲಯವು ರಾಜನಂತೆ ರಾರಾಜೀಸಿದ ಮಹಾವಿದ್ಯಾಲಯವಾಗಿದೆ ಇದನ್ನು ಯಾವಾಗಲು ಪ್ರತಿಯೊಬ್ಬರು ಪ್ರತ್ಯೇಕÀವಾಗಿ ಗುರುತಿಸುವಂತೆ ಮಾಡುತೇನೆಂದು ಹಾಗೂ ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಡಾ|| ಬಸವರಾಜ ಜಿ. ಪಾಟೀಲ ಅಷ್ಟೂರ ಅವರ ಸಲಹೆ ಸೂಚನೆಗಳೊಂದಿಗೆ ಈ ಸಂಸ್ಥೆಯ ಏಳಿಗೆಗೆ ಎಲ್ಲಾ ರೀತಿ ಸಹಾಯ ಸಹಕಾರ ನೀಡುತ್ತೇನೆಂದು ಹೇಳುತ್ತಾ ಹರ್ಷವನ್ನು ವ್ಯಕ್ತಪಡಿಸಿದರು.
ಕೊನೆಯಲ್ಲಿ ಬಿ.ವಿ.ಬಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ: ಅನೀಲಕುಮಾರ ಅಣದೂರೆ ಕಾರ್ಯಕ್ರಮದ ವಂದನೆಯನ್ನು ಕೋರಿದರೆ ನ್ಯಾಷನಲ್ ಪಬ್ಲಿಕ್ ಸ್ಕೂಲ ಶೀಕ್ಷಕಿಯರಾದ ಶ್ರೀಮತಿ ಸಂಗೀತಾ ಮತ್ತು ಪ್ರೇಮಾ ಅವರು ಪ್ರಾರ್ಥನೆ ಗೀತೆಯನ್ನು ನಡೆಸಿಕೊಟ್ಟರು ಹಾಗೂ ಶ್ರೀಮತಿ ಶೈಲಜಾ ಸಿದ್ದವೀರ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಯರಾದ ಶ್ರೀ ಬಾಬುರಾವ ದಾನಿ ಒಳಗೊಂಡಂತೆ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.