
ಕಲಬುರಗಿ;ಮಾ.1: ಅಖೀಲ ಭಾರತಿಯ ಕೋಲಿ ಸಮಾಜ ವತಿಯಿಂದ ಜೇವರ್ಗಿ ತಾಲೂಕಿನ ಹೊಳೆ ಹಂಚಿನಾಳ ಗ್ರಾಮದಲ್ಲಿರುವ ತ್ರಿಕಾಲ ಜ್ಞಾನಿ ಶ್ರೀ ಶರಣ ಮಹಾರಾಜ ಮುತ್ಯಾ ಜಾತ್ರೋತ್ಸವದಲ್ಲಿ ಶ್ರೀ ಚಂದ್ರಕಾಂತ ಮುತ್ಯಾ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರು ಹೈದ್ರಾಬಾದ ಕರ್ನಾಟಕ ಕೋಲಿ ಸಮಾಜ ಸಂಸ್ಥೆಯ ಚರಿತ್ರೆ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಶಿವಶರಣಪ್ಪ ಜಮಾದಾರ ಮಾತನಾಡಿ ಈ ಪುಸ್ತಕವು ಸಮಾಜದ ಸಬಲೀಕರಣಕ್ಕೆ ಹೋರಾಟ ಮಾಡಿದ ನಾಗಪ್ಪ ಮಾಸ್ತರ, ವಿಠಲ ಹೇರೂರ, ಮಲ್ಲಪ್ಪ ಸೌಕಾರ ಹಾಗೂ ಲಕ್ಷ್ಮೀಣರಾವ ಬೆನಕನಳ್ಳಿ, ಮಲ್ಲೇಶಪ್ಪ ಮಿಣಜಗಿ ಅವರ ಹೋರಾಟದ ಚರಿತ್ರೆಯ ವಿಷಯಗಳನ್ನು ಒಳಗೊಂಡಿದೆ. ಈ ಪುಸ್ತಕವು ಯುವ ಪಿಳಿಗೆ ಓದಿ ಅರಿವು ಮೂಡಿಸಕೊಳ್ಳಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಖೀಲ ಭಾರತಿಯ ಕೋಲಿ ಸಮಾಜದ ರಾಷ್ಟ್ರೀಯ ಸಮಿತಿ ಸದಸ್ಯ ಶಿವಲಿಂಗಪ್ಪ ಕಿನ್ನೂರ, ಭಗವಂತ ಹೇರೂರ, ಗುರುಶಾಂತಪ್ಪ ಗಾಣಗಾಪೂರ, ಸಿದ್ದರಾಜ ಕಿನ್ನೂರ, ಡಾ: ಸರ್ದಾರ ರಾಯಪ್ಪಾ, ಶಿವಶರಣಪ್ಪಾ ಜಮಾದಾರ, ಶರಣಬಸಪ್ಪ ದೊಡ್ಡಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಜಾತ್ರೆಗೆ ಆಗಮಿಸಿದ ಭಕ್ತಾದಿಗಳು ಸಹಸ್ರಾರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.