ಹೈದ್ರಾಬಾದ್ ಹೆದ್ದಾರಿ ತಡೆ-ಸಂಚಾರ ಅಸ್ತವ್ಯಸ್ತ-ಪ್ರಯಾಣಿಕರ ಪರದಾಟ

ದಿಢೀರ್ ಹತ್ತಿ ಖರೀದಿ ಬಂದ್-ರೊಚ್ಚಿಗೆದ್ದ ರೈತರಿದ ಮಿಂಚಿನ ಮುಷ್ಕರ್
ರಾಯಚೂರು ನ೯:-ಹತ್ತಿ ಖರೀದಿ ದಿಢೀರ್ ಸ್ಥಗಿತದಿಂದ ಕಂಗೆಟ್ಟ ರೈತರು, ರಾಷ್ಟ್ರೀಯ ಹೆದ್ದಾರಿ ೧೬೭ ರ ತಡೆ ಮಿಂಚಿನ ಮಷ್ಕರದಿಂದ ಹೈದ್ರಾಬಾದ್ ರಸ್ತೆಯಲ್ಲಿ ಸುಮಾರು ಒಂದು ಗಂಟೆಗು ಅಧಿಕ ಕಾಲ ಸಂಚಾರ ಸ್ಥಗಿತಗೊಂಡು ಜನ ಜೀವನ ಅಸ್ತವ್ಯವಸ್ಥಗೊಂಡ ಘಟನೆ ಇಂದು ಹೈದ್ರಾಬಾದ್ ರಸ್ತೆಯಲ್ಲಿರುವ ಹತ್ತಿ ಮಾರುಕಟ್ಟೆಯಲ್ಲಿ ನಡೆಯಿತು
ಹತ್ತಿ ಖರೀದಿ ಸ್ಥಗಿತದ ಬಗ್ಗೆ ಯಾವುದೆ ಪೂರ್ವ ಮಾಹಿತಿ ನೀಡದೆ, ಖರೀದಿದಾರರು ಏಕಾಏಕಿ ಹತ್ತಿ ಖರೀದಿ ಬಂದ್ ನಿರ್ಧಾರದಿಂದ ತೀವ್ರ ಆಕ್ರೋಶಗೊಂಡ ರೈತರು, ಹೆದ್ದಾರಿ ತಡೆ ಮುಷ್ಟಕರಕ್ಕೆ ಇಳಿಯುತ್ತಿದ್ದಂತೆ ಹೈದ್ರಾಬಾದ ರಸ್ತೆ ಸಂಚಾರ ಸ್ಥಗಿತಗೊಂಡು ರಸ್ತೆಯ ಎರಡು ಬದು ಕಿಲೊ ಮೀಟರ್ ಉದ್ದ ವಾಹನಗಳು ನಿಂತು ಪ್ರಯಾಣಿಕರು ಪರದಾಟ ನಡೆಸಿದರು.
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಹತ್ತಿ ಖರೀದಿದಾರರು ಇದು ಹತ್ತಿ ಖರೀದಿ ಬಂದ್ ಘೋಷಿಸಿದ್ದರು. ಎಂದಿನಂತೆ ಹತ್ತಿ ಖರೀದಿ ನಡೆಯುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಾದ ಯಾದಗಿರಿ ಹಾಗೂ ನೆರೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ಭಾರ ಪ್ರಮಾಣದ ಹತ್ತಿ ಮಾರಾಟಕ್ಕೆ ತರಲಾಗಿತ್ತು. ಮುಂಜಾನೆ ೫ ಗಂಟೆಯಿಂದ ಖರೀದಿಗಾಗಿ ಕಾದು ಕುಳಿತರೂ, ಹತ್ತಿ ಖರೀದಿ ಪ್ರಕ್ರಿಯೆ ಆರಂಭಗೊಳ್ಳದೆ ಇರುವುದರಿಂದ ಬೇಸತ್ತ ರೈತರು ಹೆದ್ದಾರಿ ತಡೆ ಮಿಂಚಿನ ಮುಷ್ಕರಕ್ಕಿಳಿದರು. ಇದರಿಂದ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಸಮಸ್ಯೆ ಪರಿಹಾರಕ್ಕೆ ಶತ ಪ್ರಯತ್ನ ಮಾಡಿದರು.
ಲಾರಿ ಮುಷ್ಕರದಿಂದಾಗಿ ಕಳೆದ ಎರಡು ದಿನಗಳ ನಡೆಸಿದ ಹತ್ತಿ ಸಾಗಾಣಿಕೆ ನೆನೆಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಹತ್ತಿ ಖರೀದಿ ನಿಲ್ಲಿಸಲಾಗಿದೆ ಎಂದು ಖರೀದಿದಾರರು ಅಧಿಕಾರಿಗಳಿಗೆ ತಿಳಿಸಿದರು. ಖರೀದಿ ಆರಂಭಿಸಿದರೆ ಹತ್ತಿ ಎಲ್ಲಿ ಸಂಗ್ರಹಿಸಬೇಕು ಎಂದು ಕೇಳಿದ ಖರೀದದಾರರನ್ನು ಸಮಜಾಯಿಸಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಮಾಡಲುಯ ಪೊಲೀಸ್ ಮತ್ತು ಎಪಿಎಂಸಿ ಅಧಿಕಾರಿಗಳು ಹರಸಾಹಸ ಮಾಡಿದರು.
ಸಮಸ್ಯೆ ಶೀಘ್ರ ಇತ್ಯರ್ಥವಾಗದ ಕಾರಣ ಹೈದ್ರಾಬಾದ್ ರಸ್ತೆಯಲ್ಲಿ ಸಂಚಾರ ಸ್ಥಗಿತದಿಂದ ವಾಹನಗಳ ಸಂಖ್ಯ ಹೆಚ್ಚಿ ಪರಿಸ್ಥಿತಿ ಗಂಭೀರಗೊಂಡಿತ್ತು.ತೀವ್ರ ಆಕ್ರೋಶಗೊಂಡ ರೈತರು ಮುಳ್ಳಿನ ಗಿಡಗಳನ್ನೆ ರಸ್ತೆಗೆ ಹಾಕಿ ಮುಷ್ಕರ ನಡೆಸಿದರು. ರಸ್ತೆ ತಡೆ ಮುಷ್ಕರದಲ್ಲಿ ಒಂದು ಅಂಬುಲೆನ್ಸ್ ಸಿಕ್ಕಿಕೊಂಡಿತ್ತು. ಅಲ್ಲಿಯೇ ಇದ್ದ ಜನರು ಹೋರಾಟಗಾರರ ಮನ ಹೊಲಿಸಿ ಅಂಬುಲೆನ್ಸ್ ಹೋಗಲು ದಾರಿ ಮಾಡಕೊಟ್ಟರು.
ರಾಜ್ಯ ರೈತ ಸಂಘದ ಮುಖಂಡರು ಮುಷ್ಕರ ಸ್ಥಳಕ್ಕೆ ಆಗಮಿಸಿದ ನಂತರ ಚರ್ಚೆ ಮುಂದುವರೆಯಿತು. ಹತ್ತಿ ಖರೀದಿ ನಡೆಯಲೆಬೇಕೆಂದು ರೈತರು ಪಟ್ಟು ಹಿಡಿದರೆ, ಖರೀದಿ ಅಸಾಧ್ಯವೆಂದು ಖರೀದಾರರು ಹಠ ಹಿಡಿದ್ದರು. ಎಪಿಎಂಸಿ ಅಧಿಕಾರಿಗಳು ಮತ್ತು ಪೊಲೀಸರು ಮಧ್ಯ ಪ್ರವೇಶ ಮತ್ತು ಹತ್ತಿ ಖರೀದಾರರ ಜೊತೆ ಸರಣಿ ಚರ್ಚೆಯ ನಂತರ ಖರೀದಿ ಆರಂಭಕ್ಕೆ ತೀರ್ಮಾನಿಸಲಾಯಿತು.
ವಿಳಂಬವಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡ ನಂತರ ರಸ್ತೆ ತಡೆ ಹಿಂಪಡೆದ ರೈತರು ಹತ್ತಿ ಮಾರಾಟದಲ್ಲಿ ವ್ಯಸ್ಥರಾದರು. ರಾಜ್ಯ ರೈತ ಸಂಘದ ಮುಖಂಡರಾದ ಲಕ್ಷ್ಮಣಗೌಡ,ಸಿದ್ದನಗೌಡ ಸೇರಿದಂತೆ ಇತರ ನಾಯಕರು ದಿ ೧೨ ರಂದು ಸಭೆ ಕರೆಯುವಂತೆ ಸಹಾಯಕ ಆಯುಕ್ತರನ್ನು ಕೋರಿದರು. ಮಾರುಕಟ್ಟೆಯಲ್ಲಿ ರೈತರಿಗೆ ಅನೇಕ ಸಮಸ್ಯೆಗಳಿವೆ. ಖರೀದಾರರು ವಿನಾಕಾರಣ ತೂಕದಲ್ಲಿ ಎರಡು ಮೂರು ಕೆ.ಜಿ ರಿಯಾಯಿತು ಪಡೆಯುವ ಪದ್ಧತಿಯಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಭೆ ಕಡೆಯಲು ಕೇಳಿದರು.