ಹೈದ್ರಾಬಾದ್-ತಿರುಪತಿಗೆ ೪ ಏಕಮುಖ ರೈಲು

ರಾಯಚೂರು.ಸೆ.೦೬- ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವುದಕ್ಕಾಗಿ ಹೈದ್ರಾಬಾದನಿಂದ ತಿರುಪತಿಗೆ ನಾಲ್ಕು ಏಕಮುಖ ರೈಲುಗಳನ್ನು ಬಿಡಲಾಗಿದೆ. ಈ ಏಕಮುಖ ರೈಲುಗಳು ಹೈದ್ರಾಬಾದನಿಂದ ರಾಯಚೂರ, ಮಂತ್ರಾಲಯ ಮೂಲಕ ತಿರುಪತಿಗೆ ತೆರಳುತ್ತವೆ ಎಂದು ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಅವರು ತಿಳಿಸಿದ್ದಾರೆ.
೦೭೪೮೯ ನಂಬರಿನ ರೈಲುಗಳು ಹೈದ್ರಾಬಾದನಿಂದ ಸಂಜೆ ೬.೧೫ ಕ್ಕೆ ಬಿಟ್ಟು, ಮರುದಿನ ಬೆಳಿಗ್ಗೆ ೮.೪೫ ಕ್ಕೆ ತಿರುಪತಿ ತಲುಪುತ್ತದೆ. ಈ ರೈಲುಗಳ ಸೇವೆ ಸೆ.೬, ಸೆ.೧೩, ಸೆ.೨೦ ಮತ್ತು ಸೆ.೨೭ ರಂದು ಲಭ್ಯವಿರುತ್ತವೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲು ಅವರು ಮನವಿ ಮಾಡಿದರು.