ಹೈದರ್ ಅಲಿ ಹತ್ಯೆ: ಐವರ ಬಂಧನ

ವಿಜಯಪುರ,ಮೇ.15-ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ಪತಿ ಹಾಗೂ ರೌಡಿಶೀಟರ್ ಹೈದರ್ ಅಲಿ ನದಾಫ್ ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಪೆÇಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಧಿತರನ್ನು ಶೇಖಅಹಮ್ಮದ್ ಮೋದಿ, ಸೈಯದ್ ಖಾದ್ರಿ, ಶಾನ್‍ವಾಜ್ ದಫೇದಾರ್, ಫಯಾಜ್ ಮುರ್ಶದ್, ಮೈಬೂಬ್ ಮಿರಜಕರ ಬಂಧಿತ ಆರೋಪಿಗಳು ಮೇ 6ರಂದು ಚಾಂದಪುರ ಕಾಲೋನಿಯಲ್ಲಿ ಕಾರು ಹಾಗೂ ಬೈಕ್‍ನಲ್ಲಿ ಬಂದು ರೌಡಿಶೀಟರ್ ಹೈದರ ಅಲಿ ನದಾಫ್ ಕಾರಿನಲ್ಲಿ ಹೋಗುತ್ತಿದ್ದಾಗ ಆತನನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಹತ್ಯೆಗೆ ಮುಖ್ಯ ಕಾರಣವಾಗಿದ್ದು ಮಹಾನಗರ ಪಾಲಿಕೆ ಚುನಾವಣೆ, ಹತ್ಯೆಯಾದ ಹೈದರ್ ಅಲಿ ನದಾಫ್ ತನ್ನ ಪತ್ನಿ ನಿಶಾತ್‍ಳನ್ನು ವಾರ್ಡ್ 19ರಲ್ಲಿ ಪಕ್ಷೇತರಳಾಗಿ ನಿಲ್ಲಿಸಿದ್ದನು. ಗೆಲುವು ಸಾಧಿಸಿದ್ದಳು. ಇದರಿಂದ ಹತಾಶೆಯಾದ ಎದುರಿನ ಪಕ್ಷದ ಮುಖಂಡರನ್ನು ಹೈದರ ಅಲಿಯನ್ನು ಹತ್ಯೆ ಮಾಡಿದ್ದಾರೆ.
ಈ ಸಂಬಂಧ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದ ಪೆÇಲೀಸರು ವಿಚಾರಣೆ ನಡೆಸಿದಾಗ ಬಂಧಿತ ಆರೋಪಿಗಳು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣವನ್ನು ಭೇದಿಸಿದ ಪೆÇಲೀಸರಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಬಹುಮಾನ ಘೋಷಿಸಿದ್ದಾರೆ.