ಹೈದರಾಬಾದ್ ನೆಹರೂ ಪಾರ್ಕ್ ನ 8 ಸಿಂಹಗಳಿಗೆ ಕೊರೊನಾ

ಹೈದರಾಬಾದ್ ,ಮೇ.೪-ಕೊರೊನಾ ಮಹಾಮಾರಿ ಮನುಷ್ಯನಿಗೆ ಮಾತ್ರ ಮಾರಕವಾಗಿಲ್ಲ ಪ್ರಾಣಿಗಳ ಮೇಲೂ ತನ್ನ ವಕ್ರ ದೃಷ್ಟಿ ಬೀರಿದ್ದು ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿನ ೮ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದೆ.
ನೆಹರೂ ಜೀವ ವೈವಿಧ್ಯ ಪಾರ್ಕ್ ನಲ್ಲಿನ ತಲಾ ೪ ಹೆಣ್ಣು ಗಂಡು ಸೇರಿ ೮ಸಿಂಹಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ನೆಹರೂ ಜೀವ ವೈವಿಧ್ಯ ಪಾರ್ಕ್ ನಲ್ಲಿನ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ ೮ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದಿವೆ.
ಕೊರೊನಾ ಸೋಂಕಿತ ಸಿಂಹಗಳು ಆರೋಗ್ಯ ವಾಗಿದ್ದು ಅತ್ಯಾಧುನಿಕ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ನೆಹರೂ ಜೀವ ವೈವಿಧ್ಯ ಪಾರ್ಕ್ ನ ನಿರ್ದೇಶಕ ಡಾ.ಸಿದ್ದಾನಂದ ಕುಕ್ರೇಟಿ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನೆಹರೂ ಜೀವ ವೈವಿಧ್ಯ ಪಾರ್ಕ್ ನ್ನು ಸಾರ್ವಜನಿಕರ ಪ್ರವೇಶ ಕ್ಕೆ ನಿರ್ಬಂಧ ವಿಧಿಸಲಾಗಿದೆ ಪಾರ್ಕ್ ನ ೨೫ ಮಂದಿ ಸಿಬ್ಬಂದಿಗೆ ಸೋಂಕು ತಗುಲಿದೆ.ದೇಶದಲ್ಲಿ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿದೆ.
ಕಳೆದ ವರ್ಷದ ಎಪ್ರಿಲ್ ನಲ್ಲಿ ನ್ಯೂಯಾರ್ಕ್ ನ ಬ್ರಾಂಕ್ಸ್ ಪ್ರಾಣಿ ಸಂಗ್ರಹಾಲಯದಲ್ಲಿನ ತಲಾ ೮ ಹುಲಿ ಹಾಗೂ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ್ದು ನಂತರ ಯಾವ ಪ್ರಾಣಿಯಲ್ಲೂ ಸೋಂಕು ಕಂಡುಬಂದಿರಲಿಲ್ಲ.
ಆದರೆ ಹಾಂಕಾಂಗ್ ನ ನಾಯಿ ಬೆಕ್ಕು ಗಳಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದನ್ನು ಖಚಿತ ಪಡಿಸಲಾಗಿತ್ತು.