ಹೈದರಾಬಾದ್ ನಲ್ಲಿ ಭಾರಿ ಮಳೆ ಕೊಚ್ಚಿಹೋದ ಟೆಕ್ಕಿ

ಹೈದರಾಬಾದ್, ಸೆ.26- ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡು ರಸ್ತೆ ದಾಟುತ್ತಿದ್ದಾಗ ಇಂಜಿನಿಯರ್ ರೊಬ್ಬರು ಚರಂಡಿಯೊಳಗೆ ಬಿದ್ದು ಕೊಚ್ಚಿ ಹೋಗಿದ್ದಾರೆ.
ನಾಪತ್ತೆಯಾಗಿರುವ ವ್ಯಕ್ತಿಯನ್ನು ಸಾದ್​​ನಗರದ ನಿವಾಸಿ ರಜನಿಕಾಂತ್ ಎಂದು ಗುರುತಿಸಲಾಗಿದೆ. ಈತ ಸಾಫ್ಟವೇರ್ ಉದ್ಯೋಗಿಯಾಗಿದ್ದು, ರಾತ್ರಿ ಸುಮಾರು 9 ಗಂಟೆ ವೇಳೆ ರಸ್ತೆ ದಾಟುವಾಗ ಚರಂಡಿಯಲ್ಲಿ ಬಿದ್ದು ಕೊಚ್ಚಿಹೋಗಿದ್ದಾರೆ.
ಘಟನೆ ನಡೆದ ಜಾಗದಿಂದ ಆತನ ಮನೆ 50 ಮೀಟರ್ ದೂರದಲ್ಲಿತ್ತು. ಆದರೆ ಮಳೆ ಬರುವ ಮುನ್ನ ಆತ ಮನೆ ಬಿಟ್ಟಿದ್ದು, ಧಾರಾಕಾರ ಮಳೆ ಸುರಿದ ಬಳಿಕ ಮನೆಗೆ ತೆರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚರಂಡಿಗೆ ಬಿದ್ದು ಕೊಚ್ಚಿಹೋದ ವ್ಯಕ್ತಿಮಳೆ ನೀರು ತುಂಬಿಕೊಂಡಿದ್ದ ಹಿನ್ನೆಲೆ ಚರಂಡಿ ಕಾಣಿಸದೆ ಹೊಂಡದಲ್ಲಿ ಕಾಲಿರಿಸಿದ್ದಾನೆ. ತಕ್ಷಣ ಆತ ಕೊಚ್ಚಿಹೋಗಿದ್ದು, ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ನಿನ್ನೆಯಿಂದಲೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ವಿಪತ್ತು ನಿರ್ವಹಣಾ ಪಡೆ ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದೆ.