ಹೈದರಾಬಾದ್ ಗೆ ಬಂದಿಳಿದ 30 ಲಕ್ಷ ಸ್ಪುಟ್ನಿಕ್ ಡೋಸ್

ಹೈದರಾವಾದ್, ಜೂ.1-ಸ್ಪುಟ್ನಿಕ್ ವಿ ಲಸಿಕೆಯ 30 ‌ಲಕ್ಷ ಡೋಸ್ ಗಳು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಲಸಿಕೆ‌ ಹೊತ್ತ ವಿಶೇಷ ಚಾರ್ಟರ್ಡ್ ಸರಕು ಸಾಗಾಣಿಕೆಕೆಯ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣ ತಲುಪಿದೆ ಎಂದು ಪ್ರಕಡಣೆ ತಿಳಿಸಿದೆ.
56.6 ಲಕ್ಷ ಟನ್ ಲಸಿಕೆಗಳನ್ನು ಭಾರತ ಒಂದೇ ಬಾರಿ ಆಮದು ಮಾಡಿಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಸಾಗಾಣಿಕೆ ಎಂದು ಹೇಳಲಾಗಿದೆ.
ಈ ಎಲ್ಲ ಸಾಗಾಣಿಕಾ ಪ್ರಕ್ರಿಯೆಗಳನ್ನು ಒಂದೂವರೆ ತಾಸಿನಲ್ಲಿ ಪೂರ್ಣಗೊಳಿಸಲಾಗಿದೆ. ಸ್ಪುಟ್ನಿಕ್ ವಿ ಲಸಿಕಗೆ ವಿಶೇಷ ನಿರ್ವಹಣೆ ಮತ್ತು ಸಂಗ್ರಹಣೆ ಅಗತ್ಯವಿದೆ. ಇದನ್ನು 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡಬೇಕಾಗುತ್ತದೆ.
ಡಾ.ರೆಡ್ಡೀಸ್ ಪ್ರಯೋಗಾಲಯ ಸ್ಪುಟ್ನಿಕ್‌ ವಿ ಲಸಿಕೆಯ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರದಿಂದ ಅನುಮೋದನೆ ಪಡೆದಿದೆ.
ದೇಶದಲ್ಲಿ ಮೊದಲ 25 ಕೋಟಿ ಡೋಸ್‌ ಲಸಿಕೆಯ ಪೂರೈಕೆಗೆ ಡಾ. ರೆಡ್ಡಿಸ್ ಪ್ರಯೋಗಾಲಯ ರಷ್ಯಾದ ನೇರ ಹೂಡಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಹಿಂದೆ ಆರ್‌ಡಿಐಎಫ್‌ನಿಂದ ಎರಡು ಲಕ್ಷ ಲಸಿಕೆಗಳನ್ನು ಪಡೆದಿದ್ದ ಡಾ. ರೆಡ್ಡೀಸ್, ಸ್ಫುಟ್ನಿಕ್‌ ವಿ ಲಸಿಕೆಯನ್ನು ಪ್ರಾಯೋಗಿಕವಾಗಿ ಹಾಕಲು ಅಪೊಲೊ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.