ಹೈದರಾಬಾದ್ ಗೆ ಬಂದಿಳಿದ 1.5 ಲಕ್ಷ ಡೋಸ್ ಸ್ಪುಟ್ನಿಕ್

ಹೈದ್ರಾಬಾದ್​ ,ಮೇ 1- ಬಹು ನಿರೀಕ್ಷಿತ ರಷ್ಯಾದ ಸ್ಪುಟ್ನಿಕ್ v ಕೊರೋನಾ ಲಸಿಕೆಯ ಮೊದಲ ಕಂತು ಇಂದು ಹೈದ್ರಾಬಾದ್​ಗೆ ಬಂದಿಳಿದಿದೆ.
ದೇಶದಲ್ಲಿ ಕೊರೊನಾ ಸೋಂಕು ಮಿತಿಮೀರಿರುವ ಹೊತ್ತಲೆ ಸ್ಪುಟ್ನಿಕ್ ಲಸಿಕೆ ಬಂದಿರುವುದು ಹೊಸ ಭರವಸೆ ಮೂಡಿಸಿದೆ.

ಮೊದಲ ಕಂತಿನಲ್ಲಿ 1.5 ಲಕ್ಷ ಡೋಸ್​ಗಳು ಭಾರತಕ್ಕೆ ಆಗಮಿಸಿದ್ದು, ಉಳಿದ 3 ದಶಲಕ್ಷ ಡೋಸ್​ಗಳು ಈ ತಿಂಗಳ ಅಂತ್ಯದೊಳಗೆ ಬರಲಿದೆ .
ಭಾರತದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ನೀಡಲು ಆಂಧ್ರಪ್ರದೇಶ ಮೂಲಕ ಡಾ. ರೆಡ್ಡಿ ಕೈಜೋಡಿಸಿದ್ದಾರೆ. ಹೀಗಾಗಿ ಈ ಲಸಿಕೆಗಳು ಇಂದು ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ತಲುಪಿಸಲಾಗುತ್ತಿದೆ.ನಂತರ ಜನರಿಗೆ ನೀಡಲು ವಿತರಿಸಲು ತೀರ್ಮಾನಿಸಲಾಗಿದೆ.
ಏಪ್ರಿಲ್ 13 ರಂದು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದೇಶದಲ್ಲಿ ಕೊರೋನಾ ವೈರಸ್ ವಿರುದ್ಧ ಸ್ಪುಟ್ನಿಕ್-ವಿ ಲಸಿಕೆ ಬಳಸಲು ಅನುಮೋದನೆ ನೀಡಿದೆ. ಭಾರತ ಸ್ಪುಟ್ನಿಕ್-ವಿ ಅನ್ನು ಅನುಮೋದಿಸಿದ 60 ನೇ ದೇಶ ಎಂಬುದು ಇಲ್ಲಿ ಉಲ್ಲೇಖಿಸಬಹುದು.