ಹೈಟೆನ್ಶರ್ ವೈಯರ್ ಗೆ ನಗರದಲ್ಲಿ ಮತ್ತೊಬ್ಬ ಬಾಲಕ ಬಲಿ

ಬೆಂಗಳೂರು,ಜ.೧೮-ನಗರದಲ್ಲಿ ವಿದ್ಯುತ್ ಹೈಟೆನ್ಶರ್ ವೈಯರ್ ಗೆ ಮತ್ತೊಬ್ಬ ಬಾಲಕನ ಬಲಿಯಾಗಿರುವ ದಾರುಣ ಘಟನೆ ಆರ್ ಟಿ ನಗರದ ಚಾಮುಂಡಿ ನಗರದಲ್ಲಿನ ಚಿಂಗಮ್ ಫ್ಯಾಕ್ಟರಿ ಬಳಿ ನಡೆದಿದೆ.
ಗಾಳಿಪಟ ಹಾರಿಸಲು ಹೋಗಿ ದಾರ ಹೈ ಟೆನ್ಶನ್ ವೈಯರ್ ತಗುಲಿ ವಿದ್ಯುತ್ ಹರಿದ ಪರಿಣಾಮ ಅಬೂಬಕ್ಕರ್ (೧೧) ಮೃತಪಟ್ಟಿದ್ದಾನೆ.
ಕಳೆದ ಜ.೧೬ ರಂದು ಮಧ್ಯಾಹ್ನ ಟೆನ್ಶನ್ ವೈಯರ್ ತಗುಲಿ ವಿದ್ಯುತ್ ಹರಿದು ಗಾಯಗೊಂಡ ಬಾಲಕನನ್ನು ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅಬೂಬಕ್ಕರ್ ಮೃತಪಟ್ಟಿದ್ದಾನೆ.
ಇದೇ ಜಾಗದಲ್ಲಿ ಈ ಹಿಂದೆ ನಾಲ್ವರು ಬಾಲಕರು ಹೈ ಟೆನ್ಶನ್ ವೈಯರ್ ಗೆ ಬಲಿಯಾಗಿದ್ದು, ಇದು ಐದನೇ ಘಟನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮನೆಯ ಮೇಲೆಯೇ ಹಾದು ಹೋಗಿರುವ ಹೈಟೆನ್ಶನ್ ವೈಯರ್, ಟೆರೇಸ್ ಮೇಲಿಂದ ಕೈಗೆ ತಾಕುವಂತಿದೆ.
ಹೈಟೆನ್ಶನ್ ವೈಯರ್ ಗೆ ತಾಗುವಂತೆ ಮನೆಗಳು ಎತ್ತರದಲ್ಲಿವೆ. ಹೆನ್ಶನ್ ವೈಯರ್ ಹಾದು ಹೋದ ಜಾಗದಲ್ಲಿ ಪಾರ್ಕ್ ಕೂಡ ಇದೆ. ಈ ಪಾರ್ಕ್ ಗೆ ಬರುವ ಮಕ್ಕಳಿಗೆ, ವೃದ್ಧರಿಗೂ ಕಂಟಕ ಎದುರಾಗುವ ಸಾಧ್ಯತೆಗಳಿವೆ.
ಆರ್ ಟಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.