
ಮುದಗಲ್,ಮಾ.೦೭- ಸಮೀಪದ ಕನ್ನಾಪೂರಹಟ್ಟಿ ಕ್ಷೇತ್ರ ಭಾಗದ ರೈತರಿಗೆ ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ ತಳಿ ಮಾಹಿತಿ ನೀಡಿದರು.
ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ:
ತಳಿಯನ್ನು ಬೆಳದ ರೈತನಾದ ಸಂಗಪ್ಪ ತಂದೆ ಮಲ್ಲಪ್ಪ ಅವರಿಗೆ ವಿತರಕರಿಂದ ಸನ್ಮಾನಿ ಸಲಾಯಿತು. ಈ ಸಂದರ್ಭದಲ್ಲಿ ರೈತನಾದ ಚನ್ನಬಸಪ್ಪ ತುಂಬಲಗಡ್ಡೆ ಮುದಗಲ್ ಹಾಗೂ ರೈತರು ಇಂದ ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.
ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ ತಳಿಯಿಂದ ಅಧಿಕ ಇಳುವರಿ ಬಗ್ಗೆ ಮಾಹಿತಿ:
ಹೆಚ್ಚಿನ ಇಳುವರಿ ,ಮಧ್ಯಮ ಅವಧಿ ಬಹು ಉಪಯೋಗಿ ಉತ್ತಮ ಗುಣಮಟ್ಟದ ಇಳುವರಿ ನೀಡುವ ತಳಿ,ಮಧ್ಯಮ ಎತ್ತರ ಮತ್ತು ಬೀಳುವಿಕೆಗೆ ಸಹಿಷ್ಣುತೆ ಹೊಂದಿದೆ ಹಾಗೂ ತ್ರಿಕೋನಾ ಪ್ರದೇಶದಲ್ಲಿ ಅತಿಯಾದ ನೀರು ರಸಾಯನಿಕ ಗೊಬ್ಬರ ಬಳಕೆಯ ಪರಿಣಾಮ ಭೂಮಿ ಸವಳಾಗಿದ್ದು, ಸವಳಾಗಿರುವ ಭೂಮಿಯಲ್ಲಿ ಸಜ್ಜೆಯ ಬೆಳೆಯಲು ಅನುಕೂಲ ವಾಗುವಂತೆ ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ ತಳಿಯನ್ನು ಸಂಶೋಧನೆ ಮಾಡಿದ್ದು ಕಡಿಮೆ ಖರ್ಚಿನಲ್ಲಿ ಅಧಿಕ ಭತ್ತದ ಇಳುವರಿಗಾಗಿ ಪ್ರತಿಯೊಬ್ಬ ರೈತ ಹೈಟೆಕ್ ಹೈಬ್ರಿಡ್ ೪೨೪೨ ಸಜ್ಜೆ ತಳಿಯನ್ನು ಹಾಕುವಂತೆ ವಿರೇಶ ಅಡವಿಬಾವಿಯ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಕೆ ಬಗಲ್ಲಿ ,ಟಿಸ್‌ಎಮ್ ಲಿಂಗಸೂರು, ರೈತರಾದ ಚನ್ನ ಬಸವ ತುಂಬಲಗಡ್ಡೆ ಗದ್ದೆಪ್ಪ ,ನಂದಪ್ಪ ಹೂಳಾಚಿ, ಗ್ಯಾನಪ್ಪ ಮನಗುಡಿ ಉಪಸ್ಥಿತರಿದ್ದರು.