ಹೈಟೆಕ್ ಮೀನು ಮಾರುಕಟ್ಟೆ ಆಗ್ರಹ

ರಾಯಚೂರು, ಜ.೧೮-ಮೀನುಗಾರಿಕೆ ಇಲಾಖೆ ಆವರಣದಲ್ಲಿ ಲಭ್ಯ ಇರುವ ಜಾಗದಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮೀನುಗಾರಿಕೆ ಇಲಾಖೆ ಅವರಣದಲ್ಲಿ ಲಭ್ಯವಿರುವ ಜಾಗವನ್ನು ಅನ್ಯ ಇಲಾಖೆಗಳಿಗೆ ನೀಡದಂತೆ ಸದರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ನಗರದಲ್ಲಿ ಹಲವಾರು ವರ್ಷಗಳಿಂದ ಮಟನ್ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಬೀಫ್ ಮಾರುಕಟ್ಟೆ, ಇವುಗಳಿಗೆ ತಮ್ಮದೇ ಆದ ಸ್ಥಳಗಳಲ್ಲಿ ಮಾರುಕಟ್ಟೆ ಇದೆ. ತಾಲೂಕಿನ ಹಲವು ಮೀನುಗಾರಿಕೆ ಸಂಘಗಳು ಇದ್ದು, ಆದರೆ ಮೀನುಗಾರರಿಗೆ ಮೀನು ಮಾರಾಟ ಮಾಡಲು ಸ್ವಂತ ಜಾಗವಿಲ್ಲ ಎಂದು ದೂರಿದರು.ಸಾರ್ವಜನಿಕರ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದು, ಇವರ ಬಹು ದಿನಗಳ ಬೇಡಿಕೆಯಾದ ಹೈಟೆಕ್ ಮೀನು ಮಾರುಕಟ್ಟೆಯನ್ನು ಮೀನುಗಾರಿಕೆ ಇಲಾಖೆಯ ಆವರಣದ ಸ್ಥಳದಲ್ಲಿ ನಿರ್ಮಾಣ ಮಾಡಬೇಕಿದೆ. ಈಗಾಗಲೇ ಮೀನುಗಾರಿಕೆ ಸಚಿವರಿಗೆ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಇದುವರೆಗೆ ಮಂಜೂರಿಯಾಗಿರುವುದಿಲ್ಲ ಎಂದು ಆರೋಪಿಸಿದರು. ಸ್ಥಳವನ್ನು ಅಂಕಿ ಸಂಖ್ಯೆ ಇಲಾಖೆಯವರಿಗೆ ನೀಡಿದ್ದಕ್ಕಾಗಿ ಅವರು ಕಟ್ಟಡವನ್ನು ಸಂಪೂರ್ಣವಾಗಿ ನಿರ್ಮಾಣಗೊಳಿಸಿದ್ದಾರೆ. ನಂತರ ಅದೇ ರೀತಿ ಒಂದು ಎಕರೆ ವಿಸ್ತೀರ್ಣ ಜಾಗವನ್ನು ಜಂಟಿ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ರಾಯಚೂರು ಇವರಿಗೆ ನೀಡಿರುತ್ತಾರೆ. ಈ ಇಲಾಖೆಯವರು ಇನ್ನೂ ಕಟ್ಟಡವನ್ನು ನಿರ್ಮಾಣ ಮಾಡಿರುವುದಿಲ್ಲ. ಇವರಿಗೆ ನೀಡಿರುವಂತಹ ಆದೇಶವನ್ನು ರದ್ದುಪಡಿಸಿ, ಆ ಸ್ಥಳದಲ್ಲಿ ಮೀನುಗಾರರಿಗೆ ಹೈಟೆಕ್ ಮೀನು ಮಾರು ಕಟ್ಟೆ ನಿರ್ಮಾಣ ಮಾಡಲು ಸ್ಥಳಾವಕಾಶದ ಅಗತ್ಯವಿರುತ್ತದೆ. ಈ ಸರ್ವೆ ನಂ. ೧೪೯೧/೧ ರಲ್ಲಿ ಬೇರೆ ಇಲಾಖೆಯ ಕಟ್ಟಡಗಳನ್ನು ನಿರ್ಮಾಣ ಮಾಡಬಾರದೆಂದು ತಿಳಿಸಿ, ರಾಯಚೂರು ಮೀನುಗಾರಿಕೆಯ ಅಧಿಕಾರಿಯವರ ನಿರ್ಲಕ್ಷದಿಂದ ಬೇರೆ ಇಲಾಖೆಯವರಿಗೆ ಸ್ಥಳವನ್ನು ವರ್ಗಾವಣೆ ಮಾಡಿದರೆ ರಾಯಚೂರು ಜಿಲ್ಲೆಯಲ್ಲಿ ಇರುವಂತಹ ಮೀನುಗಾರರಿಗೆ ಅನ್ಯಾಯ ಮಾಡಲಾಗಿದೆ. ಕೂಡಲೇ ಸದರಿ ಆದೇಶವನ್ನು ಮೀನುಗಾರಿಕೆಯ ಮಾರುಕಟ್ಟೆಗೆ ಸ್ಥಳವನ್ನು ಕಾಯ್ದಿರಿಸಿ ಅತಿ ಶೀಘ್ರದಲ್ಲಿ ಹೈ-ಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ತಿಂಗಳೊಳಗೆ ಸದರಿ ಆದೇಶವನ್ನು ರದ್ದುಪಡಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ, ವನ್ನಪ್ಪ, ವಿರೇಶ ಜೆ,ಮಹೇಶ ಪಾಟೀಲ್, ಸೇರಿದಂತೆ ಉಪಸ್ಥಿತರಿದ್ದರು.