ಹೈಜೀನ್ ಕಿಟ್ ವಿತರಣೆ


ಧಾರವಾಡ,ಜು.13:ಇಂದು ಧಾರವಾಡದ ರೆಡ್ ಕ್ರಾಸ್ ಸಂಸ್ಥೆಯಲ್ಲಿ,ಗರ್ಭಿಣಿಯರಿಗೆ ಹೈ ಜೀನ ಕಿಟ್ ವಿತರಣಾ ಕಾರ್ಯಕ್ರಮವನ್ಬು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉಧ್ಘಾಟಿಸಿದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಕಿಟ್ ವಿತರಿಸಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಜನರ ಆರೋಗ್ಯ ದೃಷ್ಠಿಯಿಂದ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ.
ಗರ್ಭಿಣಿಯರ ಆರೋಗ್ಯ ಅವರ ಕೈಯಲ್ಲಿಯೇ ಇದೆ,ತಮ್ಮ ಆರೋಗ್ಯ ಕಾಪಾಡಿಕೊಂಡರೆ ಮುಂದೆ ಹುಟ್ಟುವ ಮಕ್ಕಳೂ ಕೂಡ ಆರೋಗ್ಯವಂತರಾಗಿರುತ್ತಾರೆ.
ಕರೋನಾ ನಮಗೆ ಸ್ವಚ್ಛತೆಯ ಪಾಠವನ್ನು ಕಲಿಸಿಕೊಟ್ಟಿದೆ,ಆದರೂ ನಾವು ಇನ್ನೂ ಪಾಠ ಕಲಿತಿಲ್ಲ, ಹೆಣ್ಣುಮಕ್ಕಳಿಗೆ ಇಂದಿನ ಜೀವನ ಜಂಜಾಟದಲ್ಲಿ ಸಮಯದ ಅಭಾವ ಎದ್ದು ಕಾಣುತ್ತಿದ್ದು,ಒತ್ತಡ ರಹಿತ ಹಾಗೂ ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ಕೊಡಬೇಕೆಂದು ಕರೆ ನೀಡಿದರು.
ರಾಜ್ಯ ಸರ್ಕಾರವು ಜನತೆಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಸಹಾಯಧನ ನೀಡುತ್ತಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ವೀರಾಪೂರ ಮಾತನಾಡಿ,ಗರ್ಭಿಣಿ ಮಹಿಳೆಯರ ಆರೋಗ್ಯಕ್ಕಾಗಿ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಆರೋಗ್ಯ ಕಿಟ್ ಗಳನ್ನು ನೀಡುತ್ತಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳಿ,ನಿಮ್ಮ ಆರೋಗ್ಯದ ಜವಾಬ್ದಾರಿಯನ್ನು ನೀವೆ ತೆಗೆದುಕೊಳ್ಳಿ,ಪ್ರತಿ ತಿಂಗಳು ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಈ ಸಂಧರ್ಭದಲ್ಲಿ ಡಾ ಉಮೇಶ ಹಳ್ಳಿಗೇರಿ,ಮುಖಂಡರಾದ ಅರವಿಂದ ಏಗನಗೌಡರ,ಮಹಾನಗರ ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ,ಬಿ.ಆರ್ ಸಾರಥಿ,ಗಂಗಾಧರ ಕಮ್ಮಾರ,ಜ್ಯೋತಿ ಉಡುಪಿ, ಹಾಗೂ ರೆಡ್ ಕ್ರಾಸ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.