ಹೈಕೋರ್ಟ್ ಪೀಠದ ಆರೋಗ್ಯ ಕೇಂದ್ರದಿಂದ 60 ಜನರಿಗೆ ಕೋವಿಡ್ ಲಸಿಕೆ

ಕಲಬುರಗಿ.ಏ.17: ಕಲಬುರಗಿ ಹೈಕೋರ್ಟ್ ಪೀಠದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜರುಗಿದ ಕೋವಿಡ್-19 ಲಸಿಕೆ ಶಿಬಿರದಲ್ಲಿ 60 ಜನರು ಲಸಿಕೆ ಪಡೆದುಕೊಂಡರು.
27 ಹೈಕೋರ್ಟ್ ಸಿಬ್ಬಂದಿ, 16 ಸಿಬ್ಬಂದಿಗಳ ಕುಟುಂಬದವರು ಹಾಗೂ 17 ವಕೀಲರು ಸೇರಿ 60 ಜನರು ಲಸಿಕೆ ಪಡೆದರು. ಕಲಬುರಗಿ ಪೀಠದ ಹಿರಿಯ ನ್ಯಾಯಾಧೀಶರಾದ ನ್ಯಾ. ಬಿ.ಎಂ.ಶ್ಯಾಮಪ್ರಸಾದ ಅವರು ಶಿಬಿರಕ್ಕೆ ಚಾಲನೆ ನೀಡಿದರು.
ಹೈಕೋರ್ಟ್ ಪೀಠದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣಕುಮಾರ ಮತ್ತು ಹೀರಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿತಾ ಇವರುಗಳ ನೇತೃತ್ವದಲ್ಲಿ ಲಸಿಕೆ ವಿತರಣೆ ನಡೆಯಿತು.