ಹೈಕೋರ್ಟ್ ನ್ಯಾಯಾಧೀಶರಿಂದ ತಾಳಿಕೋಟಿ ನ್ಯಾಯಾಲಯ ಪರಿಶೀಲನೆ

ತಾಳಿಕೋಟಿ :ಎ.15: ತಾಲೂಕಾ ಕೇಂದ್ರವಾಗಿ ಹೊರ ಹೊಮ್ಮಿದ ತಾಳಿಕೋಟಿಯಲ್ಲಿಯ ಪುರಸಭೆಯ ಸಭಾಭವನದ ಆವರಣದ ತಾತ್ಕಾಲಿಕ ಕಟ್ಟಡದಲ್ಲಿ ಪ್ರಾರಂಭಗೊಳ್ಳಲಿರುವ ನ್ಯಾಯಾಲಯದ ಸ್ಥಳವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಅವರು ಶುಕ್ರವಾರ ವೀಕ್ಷಿಸಿದರು.

ನ್ಯಾಯಾಲಯದ ಕಟ್ಟಡವನ್ನು ಸಂಪೂರ್ಣ ವೀಕ್ಷಿಸಿ ಒಳಕೋಣೆಗಳನ್ನು,ಹೊರ ಆವರಣದ ಜಾಗೆಯನ್ನು ವೀಕ್ಷಿಸಿ ಶೀಘ್ರದಲ್ಲಿ ತಾತ್ಪೂರ್ತಿಕವಾಗಿ ನ್ಯಾಯಾಲಯ ಆರಂಭಿಸಲಾಗುವುದು ಎಂದು ತಿಳಿಸಿದರು.ಹಳೆ ಕೆಇಬಿ ಕಟ್ಟಡದ ಆವರಣ ಇನ್ನೀತರ ಬೇರೆ ಸ್ಥಳಗಳನ್ನು ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಖಾಯಂ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದ ಕುರಿತು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ,ಬಸವರಾಜ ಕಟ್ಟೀಮನಿ ಅವರ ಮಾತಿಗೆ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ನ್ಯಾಯಮೂರ್ತಿ ಶಿವಾಜಿ ನಲವಡೆ,ಜಿಲ್ಲಾ ನ್ಯಾಯಾಧೀಶ ವೆಂಕಣ್ಣ ಹೊಸಮನಿ,ಮುದ್ದೇಬಿಹಾಳ ಸಿವ್ಹಿಲ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಲಕ್ಷ್ಮೀ ಗರಗ,ಸಿವ್ಹಿಲ್ ನ್ಯಾಯಾಧೀಶ ಚಂದ್ರಕಾಂತ ಕೆ.,ಅವರು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳೊಂದಿಗೆ ಪಾಲ್ಗೊಂಡಿದ್ದರಲ್ಲದೇ ಮುದ್ದೇಬಿಹಾಳ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ,ತಹಸೀಲ್ದಾರ್ ಕೀರ್ತಿ ಚಾಲಕ,ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ,ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ,ಜೆ.ಎ.ಚಿನಿವಾರ,ಎಂ.ಎಸ್.ಅಮಾಲ್ಯಾಳ,ಎಂ.ಎಸ್.ಹಜೇರಿ,ವಿ.ಜಿ.ಮದರಕಲ್,ಎಸ್.ಪಿಪೂಜಾರಿ,ಸಿ.ಎಂ.ಅಸ್ಕಿ,ಆನಂದ ಕೊಂಗಂಡಿ,ಆನಂದ ದೊಡಮನಿ,ಬಿ.ಎಂ.ಮುಂದಿನಮನಿ,ಕಾರ್ತಿಕ ಕಟ್ಟೀಮನಿ,ಎಂ.ಎಸ್.ಜೂಲಿ,ಎಸ್.ಬಿ.ನಾರಿ,ಜಿ.ಎ.ಕಸ್ತೂರಿ ಮೊದಲಾದವರು ಇದ್ದರು.ಇದೇ ಸಮಯದಲ್ಲಿ ಉಚ್ಛನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ,ಜಿಲ್ಲಾ ನ್ಯಾಯಾಧೀಶರಾದ ಶಿವಾಜಿ ನಲವಡೆ,ವೆಂಕಣ್ಣ ಹೊಸಮನಿ ಅವರನ್ನು ವಕೀಲರ ಸಂಘದಿಂದ ಹಾಗೂ ತಾಳಿಕೋಟಿ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.