ಹೈಕೋರ್ಟ್‌ಗೆ ದಸರಾ ರಜೆ

ಬೆಂಗಳೂರು, ಅ. ೧೬-ದಸರಾ ಪ್ರಯುಕ್ತ ರಾಜ್ಯ ಹೈಕೋರ್ಟ್‌ಗೆ ಇಂದಿನಿಂದ ಅ. ೨೧ರವರೆಗೆ ರಜೆ ಘೋಷಿಸಲಾಗಿದೆ. ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ರಜಾ ಕಾಲದ ವಿಭಾಗೀಯ ಪೀಠ ಕಾರ್ಯ ನಿರ್ವಹಿಸಲಿದ್ದು, ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ಕೈಗೆತ್ತಿಕೊಳ್ಳಲಿದೆ. ವಿಭಾಗೀಯ ಪೀಠದ ವಿಚಾರಣೆ ಮುಕ್ತಾಯಗೊಂಡ ಬಳಿಕ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.