ವಿಜಯಪುರ :ಮಾ.30: ಮುಷ್ಟಿಯಲ್ಲಿ ಸೃಷ್ಠಿ ಹೈಕುಗಳು ಗ್ರಂಥ ಅತ್ಯಂತ ಅರ್ಥಪೂರ್ಣವಾಗಿ ಬರೆಯಲ್ಪಟ್ಟಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ವಿ.ಸಿ.ನಾಗಠಾಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಜಯಪುರ ನಗರ ಘಟಕ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶೇಷರಾವ ಮಾನೆ ರಚಿತ ಮುಷ್ಟಿಯಲ್ಲಿ ಸೃಷ್ಠಿ ಹೈಕ್ ಕವನವನ್ನು ಉದ್ಘಾಟಿಸಿ ಮಾತನಾಡುತ್ತ, ತ್ರಿಪದಿಯಲ್ಲಿ ಮೊದಲನೆ ಸಾಲು ಐದು ಅಕ್ಷರ ಎರಡನೆ ಸಾಲಿನಲ್ಲಿ 7 ಅಕ್ಷರ ಹಾಗೂ ಕೊನೆಯ ಸಾಲಿನಲ್ಲಿ ಮತ್ತೆ 5 ಅಕ್ಷರಗಳ ನಿಯಮಾನುಸಾರ ಹೈಕ್‍ಗಳನ್ನು ಬರೆದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪರಿಪೂರ್ಣ ಕವನ ಸಂಕಲನವಾಗಿದೆ ಎಂದರು.
ಕೃತಿಯನ್ನು ಪರಿಚಯಿಸಿದ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಭಾರತಿ ಪಾಟೀಲ ಮಾತನಾಡಿ ಕೃತಿಯು ಜ್ಞಾನದಿಂದ ಕೂಡಿದ್ದು ಪರಿವರ್ತನೆಗೆ ಕಾರಣವಾಗಿದೆ. ಇತ್ತೀಚೆಗೆ ಹೈಕ್‍ಗಳನ್ನು ಬರೆಯುವ ಬರಹಗಾರರು ವಿರಳವಾಗಿದ್ದರು ಪರಿಪೂರ್ಣತೆಯಿಂದ ಕವನವನ್ನು ರಚಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರ ಅವಶ್ಯಕತೆ ಮತ್ತು ಕೊಡುಗೆ ಅತ್ಯವಶ್ಯಕವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ವಿ.ಡಿ. ಐಹೊಳ್ಳಿ ಮಾತನಾಡಿ ಹೈಕ್ ಕವನಗಳು ಸಂದೇಶವನ್ನು ನೀಡುವಂತಿರಬೇಕು. ಅಲ್ಲದೇ ತ್ರಿಪದಿಗಳಲ್ಲಿ ಬರೆದಿರುವ ಹೈಕ್‍ಕವನಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಸಾಹಿತ್ಯ ಓದುವದರ ಜೊತೆಗೆ ಬರವಣಿಗೆಯು ಮುಂದುವರೆಯಬೇಕು. ಅದ್ಯಾಗಲೇ ಸಾಹಿತ್ಯದ ತಿರಳು ಗೊತ್ತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾದ ನ್ಯಾಯವಾದಿಗಳಾದ ಕೆ.ಎಫ್. ಅಂಕಲಗಿ, ತುಳಸಿರಾಮ ಸೂರ್ಯವಂಶಿ, ಎಂ.ಎಂ. ಖಲಾಸಿ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಬುರಣಾಪೂರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಉಪಸ್ಥಿತರಿದ್ದರು.
ಎಸ್.ಎಲ್. ಇಂಗಳೇಶ್ವರ, ಎ.ಎಸ್. ಪಟೇಲ, ಭೀಮಾಶಂಕರಯ್ಯ ಹಿರೇಮಠ, ಎಮ.ಎ. ಭಕ್ಷಿ, ಸುಭಾಸ ಯಾದವಾಡ, ಭಾರತಿ ಟಂಕಸಾಲಿ, ಪ್ರಗತಿ ಮಾನೆ, ಆನಂದ ಸಾಗರ, ಪ್ರಕಾಶ ನಡುವಿನಕೇರಿ ಮುಂತಾದವರು ಉಪಸ್ಥಿತರಿದ್ದರು.