ಹೈಕಮಾಂಡ್ ಸೂಚಿಸಿದ ಪಕ್ಷಕ್ಕೆ ಬೆಂಬಲ

ಗುರುಮಠಕಲ್ ನ 24: ರಾಜ್ಯ ಜೆಡಿಎಸ್ ನಾಯಕರು ಸೂಚಿಸಿದ ಪಕ್ಷಕ್ಕೆ ಬೆಂಬಲ ನೀಡಬೇಕು.ಯಾವ ಪಕ್ಷ ಎಂಬ ತೀರ್ಮಾನ ವಾಗುವ ವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಕರೆ ನೀಡಿದರು
ಗುರುಮಠಕಲ್. ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಪಟ್ಟಣದ ಹೀರಾಗಾರ್ಡನಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಪೂರ್ವ ಭಾವಿ ಸಭೆ ಯಲ್ಲಿ ಮಾತನಾಡಿದ ಅವರು ಸಧ್ಯದ ವಿಧಾನ ಪರಿಷತ್ ಚುನಾವಣೆ ಯನ್ನು ಕೇವಲ ಚುನಾವಣೆ ದೃಷ್ಟಿಯಿಂದ ನೋಡದೆ ಗ್ರಾಮೀಣ ಭಾಗದ ಜನರ ಕಷ್ಟಸುಖ ಗಳಲ್ಲಿ ಭಾಗಿಯಾಗಿ ಹಳ್ಳಿ ಹಳ್ಳಿಗಳಲ್ಲಿ ರುವ ಜನರ ಸಮಸ್ಯೆ ಗಳನ್ನರಿತು ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತುವ ಮೂಲಕ ಈ ಭಾಗದ ಜನರಿಗೆ ನ್ಯಾಯ ಒದಗಿಸುವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಅವರು ಕರೆನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಜೆಡಿಎಸ್ ಪಕ್ಷದ ಮುಖಂಡ ರಾದ ಅನಂತಪ್ಪ ಬೋಯಿನ್.ಬಸಣ್ಣ ದೇವರಳ್ಳಿ.ಅಮರೆಶ್ ರಾಠೋಡ್.ನರಸಪ್ಪ.ಮಾತನಾಡಿದರು.ಜ್ಞಾನೆಶ್ವರೆಡ್ಡಿ , ಸುರೇಶ್ ಚಿನ್ನ ರಾಠೋಡ್ ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟರು