ಹೈಕಮಾಂಡ್ ನಿರ್ಧಾರದಂತೆ ನನ್ನ ಸ್ಪರ್ಧೆ: ವಿಜಯೇಂದ್ರ

ಮೈಸೂರು: ಏ.01:- ಮಾಜಿ ಸಿಎಂ ಸಿದ್ದರಾಮಯ್ಯ ವರುಣ ಸ್ಪರ್ಧೆ ಬೆನ್ನಲ್ಲೇ ಬಿ.ಎಸ್.ವೈ.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆಂಬ ಗೊಂದಲಕ್ಕೆ ಬಹುತೇಕ ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರೇ ತೆರೆ ಎಳೆಯುವ ಪ್ರಯತ್ನವನ್ನು ಪರೋಕ್ಷವಾಗಿ ಮಾಡಿದ್ದಾರೆ.
ಮೈಸೂರಿನಲ್ಲಿ ಈ ಗೊಂದಲ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದಿದ್ದೇನೆ. ಇದರಲ್ಲಿ ಎನೂ ವಿಶೇಷ. ರಾಜ್ಯದ 224ಕ್ಷೇತ್ರಗಳಿಗೂ ಚುನಾವಣೆ ಘೋಷಣೆಯಾಗಿದೆ. ಆದರೆ, ವರುಣಾ ವಿಧಾನಸಭಾ ಕ್ಷೇತ್ರ ಬಗ್ಗೆ ರಾಜ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ವರುಣಾದಲ್ಲಿ ಮಾಜಿ ಸಿಎಂ ಸಿದ?ಧರಾಮಯ್ಯ ವಾಪಾಸ್ ಸ್ಪರ್ಧೆಯಿಂದ ಹೆಚ್ಚು ಚರ್ಚೆಯಾಗುತ್ತಿದೆ. ಇವತ್ತು ನನ್ನನ್ನು ರಾಜ್ಯದಾದ್ಯಂತ ಪರಿಚಯ ಮಾಡಿಕೊಟ್ಟಿದ್ದಾರೆ. ರಾಜ್ಯದೆಲ್ಲೆಡೆ ಗುರುತಿಸುತ್ತಾರೆಂದರೆ ಅದಕ್ಕೆ ವರುಣ ಕ್ಷೇತ್ರದ ಮತದಾರರು ತೋರಿಸಿರುವ ಪ್ರೀತಿಯೇ ಕಾರಣವಾಗಿದೆ ಎಂದರು.
ನಮ್ಮ ಕ್ಷೇತ್ರದ ಶಿಕಾರಿಪುರ ಕಾರ್ಯಕರ್ತರ ಆಶೀರ್ವಾದದಿಂದ ದೇಶಕ್ಕೆ ಯಡಿಯೂರಪ್ಪನವರನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ತಂದೆಯವರೂ ನಾನು ಶಿಕಾರಿಪುರದಿಂದ ಸ್ಪರ್ಧಿಸುತ್ತೇನೆಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ಈವರೆಗೂ ಯಾವುದೇ ಕ್ಷೇತ್ರವನ್ನು ಈವರೆಗೂ ಅಂತಿಮ ಮಾಡಿಲ್ಲ. ಇಂತಹ ವೇಳೆ ಅಂತಿಮವಾಗಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಒಂದು ಸುತ್ತು ಶಿಕಾರಿಪುರ ಕ್ಷೇತ್ರದ ಪ್ರವಾಸ ಮಾಡಿದ್ದೇನೆ. ಎ.3ರಿಂದ ಮತ್ತೆ ಶಿಕಾರಿಪುರದಿಂದ ಮಾಡುತ್ತಿದ್ದೇವೆ. ಪಕ್ಷದಿಂದ ಎಲ್ಲವನ್ನೂ ಕುಳಿತು ಅಂತಿಮವಾಗಿ ತೀರ್ಮಾನ ಮಾಡಲಿದ್ದಾರೆ. ವೈಯುಕ್ತಿಕ ನನ್ನ ಮನಸ್ಸಿನಲ್ಲಿ ಪಕ್ಷ ಅವಕಾಶ ಮಾಡಿಕೊಟ್ಟರೆ ಚುನಾವಣೆಗೆ ನಿಲ್ಲಬೇಕೆಂಬುದು ಇದೆ ಎಂದರು.
ನನ್ನ ಜೀವನದಲ್ಲಿ ವರುಣ ಕಾರ್ಯಕರ್ತರು, ಮತದಾರರ ಪ್ರೀತಿಯನ್ನು ನಾನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ಎರಡನೇ ಪ್ರಶ್ನೆಯೇ ಇಲ್ಲ. ಇದರ ಮಧ್ಯೆ ಪಕ್ಷ ತೀರ್ಮಾನ ಮಾಡಬೇಕಾಗುತ್ತದೆ. ಇಂದಿನಿಂದ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಲಾಗುತ್ತಿದೆ. ಕೇಂದ್ರದ ನಾಯಕರಿಗೆ ಎಲ್ಲಾ ಮಾಹಿತಿ ತಲುಪಲಿದ್ದು, ಅಂತಿಮವಾಗಿ ಅವರು ಕುಳಿತು ತೀರ್ಮಾನ ಮಾಡಲಿದ್ದಾರೆ.
ಸಭೆಯಲ್ಲಿ ವಿಜಯೇಂದ್ರ ಸ್ಪಷ್ಟನೆ
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ವರುಣ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆಯಲ್ಲಿ ನೀವು ಸ್ಪರ್ಧೆ ಮಾಡಿದರಷ್ಟೇ ಬಿಜೆಪಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಳಲು ಹೇಳಿಕೊಂಡರು. ಇದೇ ವೇಳೆ ಜಿಪಂ ಮಾಜಿ ಸದಸ್ಯ ಸದನಾಂದ ಈ ಬಾರಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ ಎಂದರು.
ಸಭೆಯಲ್ಲಿ ಎಲ್ಲರ ಮಾಹಿತಿ ಪಡೆದು ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ವರುಣಾದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾವೇ ಗೆಲ್ಲುತ್ತೇವೆ. ಪಕ್ಷ ಎಲ್ಲಿ ಟಿಕೆಟ್ ನೀಡುತ್ತೋ ಅಲ್ಲಿ ಸ್ಪರ್ಧಿಸುತ್ತೇನೆ. ಕಳೆದ ಬಾರಿ ಆದ ಘಟನೆ ಈ ಬಾರಿ ಆಗಬಾರದು. ಇದರಿಂದ ನನ್ನ ವ್ಯಕ್ತಿತ್ವ, ಪಕ್ಷಕ್ಕೂ ಅದರಿಂದ ತೊಂದರೆ ಆಗಲಿದೆ. ಕ್ಷೇತ್ರದ ಜನರಿಗೂ ಅದು ತೊಂದರೆ ಆಗಲಿದೆ. ಯಾರಿಗೂ ಸಹ ನೋವಾಗುವ ಪ್ರಶ್ನೆ ಉದ್ಭವ ಆಗಬಾರದು. ವರುಣಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ 20 ಸಾವಿರ ಅಂತರದಿಂದ ಗೆಲ್ಲಬಹುದಾಗಿದೆ. ನಾವು ಪ್ರತಿಯೊಬ್ಬರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಿದೆ. ನಾನು ಸಹ ಕ್ಷೇತ್ರದ ಪ್ರಚಾರಕ್ಕೆ ಬರುತ್ತೇನೆ. ಇಲ್ಲಿ ವಿಜಯೇಂದ್ರ ಎಂಬ ವ್ಯಕ್ತಿ ಅಲ್ಲ, ಪಕ್ಷವೇ ಮುಖ್ಯ ಕ್ಷೇತ್ರದ ಕಾರ್ಯಕರ್ತರು ವ್ಯಕ್ತಿಯನ್ನೂ ಗೆಲ್ಲಿಸದೇ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕೆಂದು ಪರೋಕ್ಷವಾಗಿ ಪಕ್ಷದ ಕಾರ್ಯಕರ್ತನ್ನು ಗೆಲ್ಲಿಸಿ ಎಂದು ಹೇಳಿದರು.