ಹೈಕಮಾಂಡ್ ನಿರ್ಧಾರಕ್ಕೆ ಬದ್ಧ-ನಾರಾಯಣಸ್ವಾಮಿ

ಕೋಲಾರ, ನ. ೧೨:ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಆಹ್ವಾನಿಸಲು ಎಲ್ಲ ಮುಖಂಡರು ಚರ್ಚಿಸಿ ನಿರ್ಧಾರಿಸಿದ ನಂತರವೇ ಅವರನ್ನು ಕೋಲಾರ ಕ್ಷೇತ್ರಕ್ಕೆ ಅಹ್ವಾನಿಸಲಾಗಿದೆ. ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ದರಾಗಿರುವುದಾಗಿ ತಿಳಿಸಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು,
ಮಾದ್ಯಮದವರೊಂದಿಗೆ ಅವರು ಮಾತನಾಡಿ ಈ ಹಿಂದೆ ಸಿದ್ದರಾಮಯ್ಯ ಅವರು ಕುರುಡುಮಲೆ ವಿನಾಯಕನ ದರ್ಶನಕ್ಕೆ ಬರಬೇಕೆಂದು ಇದ್ದ ಸಂದರ್ಭದಲ್ಲಿ ವಿರೋಧ ಪಕ್ಷದವರು ರಾಜ್ಯ ಪ್ರವಾಸ ಮಾಡಲು ಬರುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದರು. ಆಗಾ ನಾವುಗಳು ಕೋಲಾರ ಕ್ಷೇತ್ರದಲ್ಲಿ ಸ್ವರ್ದಿಸಲು ಅಹ್ವಾನಿಸಿದೆವು. ನ,೧೩ ರಂದು ಬರಲು ಸಮ್ಮತಿಸಿದ್ದಾರೆ. ಅಂದು ಬೆಳಿಗ್ಗೆ ಗಡಿಬಾಗವಾದ ರಾಮಸಂದ್ರದಲ್ಲಿ ಸ್ವಾಗತಿಸುತ್ತೇವೆ ಎಂದು ಪ್ರವಾಸವನ್ನು ವಿವರಿಸಿದರು,
ಕೆ.ಸಿ.ವ್ಯಾಲಿಗೆ ೧೪೦೦ ಕೋಟಿ ರೂ ಬಿಡುಗಡೆ ಮಾಡದಿದ್ದರೆ ಇಂದು ಕೋಲಾರ ಜಿಲ್ಲೆಯ ಪರಿಸ್ಥಿತಿ ಭೀಕರವಾಗಿರುತ್ತಿತ್ತು, ಇದರ ಜೂತೆಗೆ ವರುಣನ ಕೃಪೆಯಿಂದ ಕೆರೆಗಳು ಭರ್ತಿಯಾಗಿ ಸುಧಾರಣೆ ಕಾಣುವಂತಾಗಿದೆ ಎಂದರು
ಕಾಂಗ್ರೇಸ್ ಪಕ್ಷದ ಶಾಸಕರು,ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಸರ್ವಧರ್ಮದ ಮುಖಂಡರು ಸಹ ಸಿದ್ದರಾಮಯ್ಯ ಅವರ ಸ್ವರ್ಧೆಗೆ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರೇ ೧೩ರಂದು ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದರು.
ಪ್ರಶ್ನೆಯೊಂದಕ್ಕೆ ಎಂ.ಎಲ್.ಸಿ.ಅನಿಲ್ ಕುಮಾರ್ ಅವರು ಪ್ರತಿಕ್ರಿಯಿಸಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟಪತಿ ಅವರು ಎಲ್ಲಾ ಮುಖಂಡರನ್ನು ಆಹ್ವಾನಿಸಿದ್ದಾರೆ. ನಾವು ಯಾರನ್ನು ವೈಯುಕ್ತಿಕವಾಗಿ ಅಹ್ವಾನಿಸಿಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕಾಂಗ್ರೇಸ್ ಪಕ್ಷವು ಅಧಿಕಾರ ಕಳೆದು ಕೊಂಡಿದ್ದು ಸಂಕಷ್ಟದಲ್ಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಕಳೆದು ಕೊಂಡಿದೆ.
ಕಾಂಗ್ರೇಸ್ ಪಕ್ಷವನ್ನು ಸಧೃಡವಾಗಿಸಿ ದೇಶವನ್ನು ಮತ್ತು ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯೂವ ದೆಸೆಯಲ್ಲಿ ನಾವು ಆಶಾವಾದಿಗಳಾಗಿದ್ದೇವೆ, ಈಗಾಗಲೇ ಸಿದ್ದರಾಮಯ್ಯ ಅವರು ಎರಡು ಪ್ರತ್ಯೇಕ ಏಜೆನ್ಸಿಗಳಿಂದ ಸರ್ವೆ ಮಾಡಿಸಿದ್ದು ಒಂದರಲ್ಲಿ ಶೇ೫೬, ಮತ್ತೊಂದರಲ್ಲಿ ಶೇ೬೦ರಷ್ಟು ಫಲಿತಾಂಶದ ಬಗ್ಗೆ ಭರವಸೆ ಸಿಕ್ಕಿದೆ. ಅವರು ಅಕ್ಟೋಬರ್ ೫ ರಿಂದ ೧೩ರವರೆಗೆ ೬ಸಾವಿರ ಮಂದಿಯನ್ನು ಸರ್ವೆ ಮಾಡಿ ಪುರಕವಾದ ಫಲಿತಾಂಶವಿದೆ ಎಂದು ವರದಿ ಮಾಡಿದ್ದಾರೆ ಎಂದು ಹೇಳಿದರು,