ಹೈಕಮಾಂಡ್ ತಮ್ಮ ಮೇಲಿಟ್ಟಂತಹ ವಿಶ್ವಾಸ ಉಳಿಸಿಕೊಳ್ಳುವುದಾಗಿ ಅಲ್ಲಂಪ್ರಭು ಪಾಟೀಲ್ ಭರವಸೆ

ಕಲಬುರಗಿ:ಏ.6:ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ತÀಮ್ಮನ್ನು ಕಣಕ್ಕಿಳಿಸುವ ಮೂಲಕ ಮತ್ತೊಮ್ಮೆ ತಮಗೆ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮಾಜಿ ಎಂಎಲ್‍ಸಿ ಹಾಗೂ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಹುರಿಯಾಳಾಗಿರುವ ಅಲ್ಲಂಪ್ರಭು ಪಾಟೀಲ್ ನೆಲೋಗಿ ಅವರು ಪಕ್ಷದ ಹೈಕಮಾಂಡ್, ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮೀತಿ ಅಧಯಕ್ಷ ಎಂಬಿ ಪಾಟೀಲ್ ಸೇರಿದಂತೆ ಎಲ್ಲಾ ಹಂತದ ಪ್ರಮುಖರಿಗೂ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ್ ಆದಿಯಾಗಿ ಎಲ್ಲಾ ಮುಖಂಡರಿಗೆ ಧನ್ಯವಾದ ಹೇಳಿದ್ದಾರೆ.

ಪಕ್ಷದಿಂದ ಟಿಕೆಟ್ ಘೋಷಣೆಯಾದ ನಂತರ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳೊಂದಿಗೆ ನಿರಂತರ ಜನಮಾನಸದೊಂದಿಗೆ ಇರುವ ತಾವು ಬರುವ ದಿನಗಳಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷದ ಎಲ್ಲರೊಂದಿಗೆ ಸೇರಿಕೊಂಡು ಕೆಲಸ ಮಾಡುವ ಮೂಲಕ, ಪಕ್ಷದ ಸ್ಥಳೀಯವಾಗಿರುವ ಮುಖಂಡರೆಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನರ ಮನೆ ಮನೆಗೆ ಹೋಗಿ ಅವರ ಆಶಿರ್ವಾದ ಪಡೆದು ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ಮಾಡುವುದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಕಳೆದ 2 ದಶಕದಿಂದ ಕಾಂಗ್ರೆಸ್ ಪಕ್ಷದ ತತ್ವ- ಸಿದ್ದಾಂತ ನಂಬಿಕೊಂಡು ಪಕ್ಷದಲ್ಲಿದ್ದ ತಮಗೆ ಹೈಕಮಾಂಡ್ ಅಸೆಂಬ್ಲಿ ಕಣಕ್ಕೆ ಇಳಿಸುವ ಮೂಲಕ ಮತ್ತೊಮ್ಮೆ ತಮ್ಮಲ್ಲಿ ವಿಶ್ವಾಸ ಪ್ರಕಟಿಸಿದ್ದಲ್ಲದೆ ಜನಮತ ಪಡೆದು ಗೆದ್ದು ಬರುವಂತೆ ಆಶಿರ್ವಾದ ಮಾಡಿದೆ. ಹೈಕಮಾಂಡ್ ಸೂಚಿಸಿದಂತೆಯೇ ತಾವು ಕಲಬುರಗಿ ದಕ್ಷಿಣ ಮತಕ್ಷೇತ್ರಲ್ಲಿ ಮುಂದಿನ ದಿನಗಲಲ್ಲಿ ಹೆಚ್ಚಿನ ಕೆಲಸ ಮಾಡುವ ಮೂಲಕ ಪಕ್ಷದ ಪರ ಜನಮತ ಕ್ರೂಢೀಕರಿಸುವ ಮೂಲಕ ಜಯಶಾಲಿಯಾಗಲು ಶಕ್ತಿಮೀರಿ ಶ್ರಮಿಸುವ ಹಾಗೂ ಹೈಕಮಾಂಡ್ ತಮ್ಮ ಮೇಲಿಟ್ಟಂತಹ ವಿಶ್ವಾಸ, ಭರವಸೆಗಳನ್ನು ಆಪಾಡಿಕೊಳ್ಳುವುದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.