
ನವದೆಹಲಿ,ಏ.7- ನನ್ನ ರಾಜ ತುಂಬಾ ಬುದ್ದಿವಂತ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವಂತೆ ಮಾಡಿದೆ ಎಂದು ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಕಿರಣ್ ಕುಮಾರ್ ರೆಡ್ಡಿ ದೆಹಲಿಯಲ್ಲಿಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ತೊರೆಯಬೇಕೆಂದು ನಾನು ಎಂದಿಗೂ ಊಹಿಸಿರಲಿಲ್ಲ.ಪಕ್ಷದ ನಾಯಕತ್ವದ “ತಪ್ಪು ನಿರ್ಧಾರಗಳಿಂದ” ಕಾಂಗ್ರೆಸ್ ಬಿಡಬೇಕಾಯಿತು ಎಂದಿದ್ದಾರೆ.
ಜನರು ನೀಡಿದÀ ತೀರ್ಪನ್ನು ಒಪ್ಪಿಕೊಳ್ಳಲು ಮತ್ತು ತಪ್ಪು ಸರಿ ಮಾಡಿಕೊಳ್ಳಲು ಅಸಮರ್ಥರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡಬೇಕಾಗಿ ಬಂತು ಎಂದು ಅವರು ತಿಳಿಸಿದ್ದಾರೆ,
ಕಾಂಗ್ರೆಸ್ ಹೈಕಮಾಂಡ್‍ನ ಕೆಟ್ಟ ನಿರ್ಧಾರಗಳಿಂದ ರಾಜ್ಯದಿಂದ ರಾಜ್ಯಕ್ಕೆ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಪಕ್ಷ ಹಾಳಾಗುತ್ತಿದೆ. ಜನರೊಂದಿಗೆ ಸಂವಹನ ನಡೆಸುವುದಿಲ್ಲ. ಅವರು ನಾಯಕರ ಅಭಿಪ್ರಾಯವನ್ನು ತೆಗೆದುಕೊಳ್ಳುವುದಿಲ್ಲ. ಇದು ಒಂದು ರಾಜ್ಯದ ಕಥೆಯಲ್ಲ. ಇದು ದೇಶದಾದ್ಯಂತ ಕಥೆಯಾಗಿದೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ ಕಿರಣ್ ಕುಮಾರ್ ರೆಡ್ಡಿ, “ಹಳೆಯ ಮಾತಿದೆ – ನನ್ನ ರಾಜ ತುಂಬಾ ಬುದ್ಧಿವಂತ, ಅವನು ಸ್ವಂತವಾಗಿ ಯೋಚಿಸುವುದಿಲ್ಲ ಮತ್ತು ಯಾರ ಸಲಹೆಯನ್ನು ಕೇಳುವುದಿಲ್ಲ” ಎಂದು ರಾಹುಲ್ ಗಾಂಧಿ ವಿರದ್ದ ವಾಗ್ದಾಳಿ ನಡೆಸಿದ್ದಾರೆ.
1984 ರಿಂದ ಕಾಂಗ್ರೆಸ್‍ನ ಅವನತಿಯೊಂದಿಗೆ ಬಿಜೆಪಿಯ ಬೆಳವಣಿಗೆ ಬಗ್ಗೆ ಹಾಗು ಮೋದಿ ನೇತೃತ್ವದ ಆಡಳಿತ ಪಕ್ಷದ ನಾಯಕರ ಕಠಿಣ ಪರಿಶ್ರಮ ಮತ್ತು ರಾಷ್ಟ್ರದ ಕಡೆಗೆ ಬದ್ಧತೆಗಾಗಿ ಶ್ಲಾಘಿಸಿದರು.
ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಕೇಸರಿ ಪಕ್ಷಕ್ಕೆ ಬದಲಾದ ಒಂದು ದಿನದ ನಂತರ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ