ಹೈಕಮಾಂಡ್‍ಗೆ ಬಿಟ್ಟ ವಿಚಾರ : ಸಚಿವ ಪಾಟೀಲ

ಕಾಗವಾಡ,ಜೂ9 : ಮುಖ್ಯಮಂತ್ರಿ ಬದಲಾವಣೆ ವಿಷಯ ಇದೊಂದು ದೊಡ್ಡ ವಿಷಯ. ಇದು ಹೈಕಮಾಂಡಗೆ ಬಿಟ್ಟ ವಿಷಯ. ಪ್ರಧಾನಮಂತ್ರಿ ಹಾಗೂ ಅಮೀತ ಷಾ ಅವರಿಗೆ ಬಿಟ್ಟ ವಿಚಾರ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಕಾಗವಾಡ ತಾಲೂಕಿನ ಕೆಂಪವಾಡ ಕಚೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆಗೆ ನಮ್ಮ ಪಕ್ಷದ ಶಾಸಕರು ಯಾರು ಹೇಳುತ್ತಿಲ್ಲ. ಅದು ಸುಳ್ಳು. ಈಗಾಗಲೇ ಯಡಿಯೂರಪ್ಪ ಅವರು ಹೇಳಿದ್ದಾರೆ. ನಾನೂ ಪಕ್ಷದ ಶಿಸ್ತಿನ ಸಿಪಾಯಿ ಒಂದು ವೇಳೆ ಹೈಕಮಾಂಡ್ ಆದೇಶ ನೀಡಿದರೆ ನಾನೂ ರಾಜೀನಾಮೆ ನೀಡಲು ಸಿದ್ದ ಎಂದು ಹೇಳಿರುವುದು ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಜವಳಿ ಖಾತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನೇಕಾರರಿಗೆ ಸರ್ಕಾರ ಧನ ಸಹಾಯ ನೀಡುತ್ತಿದ್ದು ಕಳೆದ ವರ್ಷನೂ ನಮ್ಮ ಸರ್ಕಾರ ನೀಡಿದೆ. ಈ ವರ್ಷ ಕೂಡಾ ಕೈಮಗ್ಗ ಸಮ್ಮಾನ ಯೋಜನೆ ಅಡಿಯಲ್ಲಿ ಪ್ರತಿ ನೇಕಾರರಿಗೂ 3,000 ಧನ ಸಹಾಯ ನೀಡಲಾಗಿದೆ. ಈ ಬಾರಿ ನೇಕಾರರಿಗೆ ತೊಂದರೆಯಾಗದಂತೆ ಕೇವಲ ಒಂದು ಬಿಳಿ ಹಾಳೆಯ ಮೇಲೆ ನೇಕಾರರು ಎಂದು ರುಜು ಮಾಡಿದರೆ ಸಾಕು. ಈ ಬಾರಿ ಆನ್‍ಲೈನ್ ಅಪ್ಲಿಕೇಶನದಲ್ಲಿ ಹೆಚ್ಚಿನ ದಾಖಲಾತಿಗಳನ್ನು ಕೇಳಲಾಗಿಲ್ಲ, ಗಡಿಯಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗಿದೆ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು.