ಹೇಳಿದ್ದಷ್ಟೇ ಕೆಲಸ ಮಾತ್ರ ಆಗಲಿಲ್ಲ

ಬಳ್ಳಾರಿ, ನ.6: ನಗರಾಭಿವೃದ್ಧಿ ಪ್ರಾಧಿಕಾರ ಇಂದಿರಾಗಾಂಧಿ ವೃತ್ತದಲ್ಲಿ ಬಾಕಿ ಇರುವ ಪೌಂಟೇನ್ ಕಾಮಗಾರಿಯನ್ನು‌ ವಾರದಲ್ಲಿ ಆರಂಭಿಸಬೇಕು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ ಗುತ್ತಿಗೆದಾರರಿಗೆ ಎಚ್ಚರಿಕೆ ಕೊಟ್ಟ ಬಗ್ಗೆ ಮಾಧ್ಯಮಗಳಿಗೆ ಹೇಳಿದ್ದರು. ಆದರೆ ಈ ವರಗೆ ಕೆಲಸ ಮಾತ್ರ ಆರಂಭಗೊಂಡಿಲ್ಲ.
ಕಳೆದ ಮೂರು ವರ್ಷಗಳಿಂದ ಈ ವೃತ್ತದ ಅಗಲೀಕರಣ ಮತ್ತು ಸೌಂದರ್ಯದ ಕಾಮಗಾರಿಯನ್ನು ಬುಡಾ ಹಮ್ಮಿಕೊಂಡಿದೆ. ಆಗೊಮ್ಮೆ, ಈ ಗೊಮ್ಮೆ ಮಾಡುತ್ತ ಬಂದಿದ್ದು. ಇನ್ನೂ ಇಲ್ಲಿ ವಿಭಜಕಗಳ ಮತ್ತು ಪೌಂಟೇನ್ ಕಾಮಗಾರಿ ಆಗಿಲ್ಲ.
ಅಷ್ಟೇ ಅಲ್ಲದೆ ಇಲ್ಲಿ‌ ಅಳವಡಿಸಿರುವ ಸಿಗ್ನಲ್ ಲೈಟ್ ಗಳು ಸಹ ಈ ವರಗೆ ಕಾರ್ಯಾರಂಭ ಮಾಡಿಲ್ಲ.
ಈ ಬಗ್ಗೆ ಈ ಹಿಂದೆ ವರದಿ ಮಾಡಿದಾಗ ಬುಡಾ ಅಧ್ಯಕ್ಷರು ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆದು ಪರಿಶೀಲನೆ ಮಾಡಿದ್ದರು. ಅಲ್ಲದೆ ಒಂದು ವಾರದಲ್ಲಿ ಕೆಲಸ ಆರಂಭಿಸಬೇಕು ಇಲ್ಲದಿದ್ದರೆ ಬ್ಲಾಕ್ ಲಸ್ಟ್ ನಲ್ಲಿ ಇಡುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರು.
ಆದರೆ ಗುತ್ತಿಗೆದಾರ ಬುಡಾ ಅಧ್ಯಕ್ಷರ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿಲ್ಲ. ಹೀಗಾಗಿ ಈ ವರಗೆ ಬಾಕಿ‌ ಕಾಮಗಾರಿ ಆರಂಭಗೊಂಡಿಲ್ಲ.