
ಲಕ್ಷ್ಮೇಶ್ವರ,ಸೆ.6: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಸಚಿವ ಉದಯ ನಿಧಿ ಸ್ಟಾಲಿನ್ ಅವರು ಸನಾತನ ಹಿಂದೂ ಧರ್ಮದ ಕುರಿತು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಎಂದು ಧಾರ್ಮಿಕ ಮುಖಂಡ ವೀರಣ್ಣ ಪವಾಡ ದ ಹೇಳಿದ್ದಾರೆ.
ಅವರು ಹೇಳಿಕೆಯನ್ನು ನೀಡಿ ಸಾವಿರಾರು ವರ್ಷಗಳಿಂದಲೂ ಸನಾತನ ಧರ್ಮವೂ ತನ್ನದೇ ಆದ ಸಾಂಸ್ಕೃತಿ ಪರಂಪರೆ ಇತಿಹಾಸವನ್ನು ಹೊಂದಿದ್ದು ಅದನ್ನು ಅರಿಯದೆ ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಗೊಂದಲ ನಿರ್ಮಾಣ ಮಾಡಲು ಹೊರಟಿರುವ ಸ್ಟಾಲಿನ್ ಅವರ ನೀತಿ ಕುತಂತ್ರದಿಂದ ಕೂಡಿದೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಸನಾತನ ಧರ್ಮದ ಸಿದ್ಧಾಂತವನ್ನು ವಿರೋಧಿಸಬೇಕು ಎಂದು ಹೇಳಲು ಇವರಿಗೇನು ಹಕ್ಕಿದೆ ಎಂದು ಹೇಳಿದ್ದಾರೆ.
ಸಚಿವ ಉದಯ ನಿಧಿಯವರು ದೇಶದ ಜನತೆಯ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರು ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.