ಹೇಳಿಕೆಗೆ ಖಂಡನೆ

ಹುಬ್ಬಳ್ಳಿ,ಜೂ2 : ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಧಾರವಾಡದ ಹಿಟ್ಲರ್ ಎಂದು ಕರೆದಿರುವ ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಅವರ ನಡೆ ಖಂಡನೀಯ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನು ಕಂಡ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಜೋಶಿಯವರಿಗೆ ಹಿಟ್ಲರ್ ಎಂದು ಹೇಳಿರುವುದು ಸರಿಯಾದ ನಡೆಯಲ್ಲ ಎಂದರು.
ರಾಜಕೀಯ ಜೀವನದಲ್ಲಿ ಪ್ರಹ್ಲಾದ ಜೋಶಿಯವರಿಗೆ ಕಪ್ಪು ಚುಕ್ಕಿ ಇಲ್ಲದಂತೆ, ಕಳೆದ ನಾಲ್ಕು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತವರ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಮತದಾರರು ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ. ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಜೋಸೆಫ್, ಸಿದ್ದಣ್ಣ ಅಮರಾವತಿ, ಗಣೇಶ್ ಅಮರಾವತಿ, ಶ್ರೀನಿವಾಸ್ ದಲಬಂಜನ, ವಿಜಯಕುಮಾರ್ ಅಪ್ಪಾಜಿ ಉಪಸ್ಥಿತರಿದ್ದರು.