ಹೇಮರೆಡ್ಡಿ ಮಲ್ಲಮ್ಮ ಜಯಂತಿ: ನಿರ್ದೇಶನಕ್ಕೆ ಒತ್ತಾಯ

ಬೀದರ್: ಮೇ.9:ಮೇ 10 ರಂದು ಜಿಲ್ಲೆಯ ಎಲ್ಲ ಶಾಲಾ, ಕಾಲೇಜು, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಡ್ಡಾಯವಾಗಿ ಆಚರಿಸಲು ನಿರ್ದೇಶನ ನೀಡಬೇಕು ಎಂದು ಶ್ರೀ ಹೇಮ ವೇಮ ರೆಡ್ಡಿ ಸಂಘ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದೆ.

ಸಂಘದ ಕಾರ್ಯದರ್ಶಿ ಅನಂತ ರೆಡ್ಡಿ ಟಿ. ಮಿರ್ಜಾಪುರ ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮೇ 10 ರಂದು ವಿಧಾನಸಭೆ ಚುನಾವಣೆಯ ಮತದಾನ ಇದೆ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಲಭ್ಯವಿಲ್ಲದ ಕಾರಣ ನೀಡಿ ಜಯಂತಿ ಆಚರಿಸದಿದ್ದಲ್ಲಿ ಸಮಂಜಸ ಆಗಲಾರದು. ಕಾರಣ ತಪ್ಪದೇ ಜಯಂತಿ ಆಚರಣೆಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.