ಹೇಮರೆಡ್ಡಿ ಮಲ್ಲಮ್ಮ ಜಯಂತಿ 10ಕ್ಕೆ

ಬೀದರ್:ಮೇ.6: ನಗರದ ಅಮಲಾಪುರ ರಸ್ತೆಯಲ್ಲಿ ಇರುವ ಹೇಮರೆಡ್ಡಿ ಮಲ್ಲಮ್ಮ ಮಂದಿರದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಮೇ 9 ಮತ್ತು 10 ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಇರುವ ಕಾರಣ ಈ ಬಾರಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಗೌರವಾಧ್ಯಕ್ಷ ಸಂಗ್ರಾಮ ರೆಡ್ಡಿ ಹಾಗೂ ಕಾರ್ಯದರ್ಶಿ ಕೆ. ಗೋಪಾಲರೆಡ್ಡಿ ತಿಳಿಸಿದ್ದಾರೆ.

ಮೇ 9 ರಂದು ಸಂಜೆ 7ಕ್ಕೆ ದೇವಸ್ಥಾನ ಪರಿಸರದಲ್ಲಿ ಕುಂಭ ಕಳಸ ಹೊತ್ತ ಮಹಿಳೆಯರ ಮೆರವಣಿಗೆ, ಸಂಜೆ 7.30ಕ್ಕೆ ದೀಪೋತ್ಸವ, ನಂತರ ಮಹಾ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಮೇ 10 ರಂದು ಬೆಳಿಗ್ಗೆ 6.30ಕ್ಕೆ ಅಭಿಷೇಕ, ಬೆಳಿಗ್ಗೆ 7ಕ್ಕೆ ಧ್ವಜಾರೋಹಣ, ಬೆಳಿಗ್ಗೆ 8ಕ್ಕೆ ಹೇಮರೆಡ್ಡಿ ಮಲ್ಲಮ್ಮ ತೊಟ್ಟಿಲು ಕಾರ್ಯಕ್ರಮ ಜರುಗಲಿದೆ. ಬಳಿಕ ಮಹಾ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.