ರಾಯಚೂರು,ಜು.೧೩-
ಹೇಮರಾಜ್ ಅಸ್ಕಿಹಾಳ ಇವರಿಗೆ ನಿಗಮ ಮಂಡಳಿಯ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿ ಕಾರ್ಮಿಕ ಹಕ್ಕುಗಳ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಕಾರ್ಮಿಕರ ಹಕ್ಕುಗಳಿಗಾಗಿ ಕಾರ್ಮಿಕರ ಪರವಾಗಿ ಸುಮಾರು ೧೨-೧೩ ವರ್ಷಗಳಿಂದ ನಿರಂತರವಾಗಿ ಕಾರ್ಮಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಅನೇಕ ಅಸಂಘಟಿತ ಕಾರ್ಮಿಕರಿಗೆ ಹಾಗೂ ಇನ್ನಿತರ ಕಟ್ಟಡ ಕಾರ್ಮಿಕರಿಗೆ ಹಾಗೂ ವಿವಿಧ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಇವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಇಂದು ಜಿಲ್ಲೆಯ ಅನೇಕ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಪಡೆದಿದ್ದಾರೆ.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸರ್ಕಾರದಿಂದ ನಾಮ ನಿರ್ದೇಶನ ಮಾಡುವ ಯಾವುದೇ ನಿಗಮ ಮಂಡಳಿಯ ಸದಸ್ಯರನ್ನಾಗಿ ಹೇಮರಾಜ್ ಅಸ್ಕಿಹಾಳ್ ಇವರನ್ನು ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಶ್ರೀಕಾಂತ್, ಗುರುಬಸವ,ಎಂ.ಶಬಣಬಸವ ಅಸ್ಕಿಹಾಳ, ಲಕ್ಷ್ಮಣ ಕಲ್ಲೂರ, ತಾಯಣ್ಣ ಗಧಾರ, ಮಾಂಚಯ್ಯ ಅಸ್ಕಿಹಾಳ, ರಾಜು ಬೊಮ್ಮನಾಳ, ಸಣ್ಣ ನರಸಿಂಹ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.